ತೋರನ್ ಅಂದರೆ ನಾವು ಮಾಡುವ ಪಲ್ಯ ರೀತಿಯಿದ್ದು ಆದರೆ ರುಚಿಯಲ್ಲಿ ಸಂಪುರ್ಣ ಭಿನ್ನವಾಗಿರುತ್ತದೆ. ಇವತ್ತು ನಾವು ತೋರನ್ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
* ಬೀನ್ಸ್
* ಹಸಿ ಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
* ಈರುಳ್ಳಿ 1
* ಬೆಳ್ಳುಳ್ಳಿ 4-5 ಎಸಳು
* ತುರಿದ ತೆಂಗಿನಕಾಯಿ 1 ಕಪ್
* ಜೀರಿಗೆ ಪುಡಿ 1 ಚಮಚ
* ಕೆಂಪು ಮೆಣಸಿನ ಪುಡಿ 1/2 ಚಮಚ
* ಅರಿಶಿಣ 1/4 ಚಮಚ
* ಎಣ್ಣೆ 2 ಚಮಚ
* ಸಾಸಿವೆ ಮತ್ತು ಕರಿಬೇವಿನ ಎಲೆ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಬೀನ್ಸ್ ತೊಳೆದು ಕತ್ತರಿಸಿಡಬೇಕು . ಈರುಳ್ಳಿಯನ್ನು ಕತ್ತರಿಸಬೇಕು.
2. ಈಗ ಬಾಣಲೆಯನ್ನು ಉರಿಯಲ್ಲಿಟ್ಟು ಸ್ವಲ್ಪ ಎಣ್ಣೆ ಹಾಕಿ, ಅದು ಬಿಸಿಯಾದಾಗ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬಂದ ಮೇಲೆ ಕರಿಬೇವಿನ ಎಲೆ, ಬೆಳ್ಳುಳ್ಳಿ ಮತ್ತು ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ಈಗ ಕತ್ತರಿಸಿದ ಬೀನ್ಸ್ ಅನ್ನು ಹಾಕಿ ಸ್ವಲ್ಪ ಕೆಂಪು ಮೆಣಸಿನ ಪುಡಿ ಮತ್ತು ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ 1/2 ಗ್ಲಾಸ್ ನೀರು ಹಾಕಿ ಬೇಯಲು ಇಡಬೇಕು.
4. ಬೆಂದ ಮೇಲೆ ತುರಿದ ತೆಂಗಿನ ಕಾಯಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ 2-3 ನಿಮಿಷ ಬೇಯಿಸ ಬೇಕು. ಇದನ್ನು ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
ಅಲ್ಲದೆ ಈ ರೀತಿ ಮಾಡಿ ಚಪಾತಿ, ದೋಸೆ ಜೊತೆ ತಿಂದರೂ ರುಚಿಕರವಾಗಿರುತ್ತದೆ. ಈ ತೋರನ್ ಅನ್ನು ಬೀನ್ಸ್ ಬದಲು ಕಾಳುಗಳಿಂದ ಅಥವಾ ಹೆಸರುಕಾಳುಗಳಿಂದ, ಕಡಲೆಯಿಂದ ಕೂಡ ತಯಾರಿಸಬಹುದು.