ಹೆಚ್ಚಾಗಿ ಎಲ್ಲರೂ ಅನ್ನದ ಪೊಂಗಲ್ ಮಾಡ್ತಾರೆ. ಆದರೆ ನಾನು ಅನ್ನದ ಬದಲು ಅವಲಕ್ಕಿ ಹಾಕಿ ಪೊಂಗಲ್ ಮಾಡ ಬಹುದು.

ಬೇಕಾಗುವ ಸಾಮಾಗ್ರಿಗಳು :
ದಪ್ಪ ಅವಲಕ್ಕಿ 1 ಬಟ್ಟಲು
ಹೆಸರು ಬೇಳೆ 1 ಬಟ್ಟಲು
ಹಸಿ ಮೆಣಸಿನಕಾಯಿ 2
ತುಪ್ಪ 4 -5 ಚಮಚ
ಗೋಡಂಬಿ
ಜೀರಿಗೆ
ಕರಿಬೇವಿನ ಎಲೆ
ಇಂಗು 1 ಚಿಟಿಕೆ
ಕಾಳು ಮೆಣಸಿನ ಪುಡಿ 1/2 ಚಮಚ
ಶುಂಠಿ 1 ಇಂಚು – ತುರಿದುಕೊಳ್ಳಬೇಕು
ಬೆಲ್ಲ ( ಸಣ್ಣ ಚೂರು).
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಒಂದು ಕುಕ್ಕರ್ ಒಲೆಯ ಮೇಲಿಟ್ಟು ಕಾದ ಮೇಲೆ 2 ಚಮಚ ತುಪ್ಪ ಹಾಕಿ ತೊಳೆದಿರುವ ಅವಲಕ್ಕಿ ಮತ್ತು ಹೆಸರು ಬೇಳೆಯನ್ನು ಹಾಕಿ 2 ನಿಮಿಷ ಚೆನ್ನಾಗಿ ಕೈಯಾಡಿಸಿ ರುಚಿಗೆ ತಕ್ಕಷ್ಟು ಉಪ್ಪು, ಸಣ್ಣ ಬೆಲ್ಲದ ಭಾಗ ಮತ್ತು 3-4 ಲೋಟ ನೀರು ಹಾಕಿ ( ಅಕ್ಕಿಗಾದರೆ 4 ಲೋಟ ನೀರು ಬೇಕು) ಮುಚ್ಚುಳ ಮುಚ್ಚಿ 4-5 ವಿಷಲ್ ಕೂಗಿಸಿ.

RELATED ARTICLES  ಬ್ರೆಡ್ ಸಮೋಸಾ ಮಾಡೋದನ್ನು ಕಲಿತುಕೊಳ್ಳಿ.

ಒಂದು ಕಡಾಯಿಯನ್ನು ತೆಗೆದುಕೊಂಡು ಆದು ಕಾದ ನಂತರ 2-3 ಚಮಚ ತುಪ್ಪ ಹಾಕಿ ಜೀರಿಗೆ, ಹಸಿ ಮೆಣಸಿನಕಾಯಿ, ಕಾಳು ಮೆಣಸಿನಪುಡಿ,ಕರಿ ಬೇವಿನ ಎಲೆ, ಶುಂಠಿ, ಗೋಡಂಬಿ ಹಾಕಿ ಬಣ್ಣ ಬದಲಾಗುವ ವರೆಗೂ ಹುರಿದು ಇಂಗು ಹಾಕಿ ಚೆನ್ನಾಗಿ ಕೈಯಾಡಿಸಿ.

RELATED ARTICLES  ಮಹಾರುಚಿಯ ಕಣ್ಕಟ್ಟು, ತಿಂದ್ನೋಡಿ ಒಬ್ಬಟ್ಟು!

ಬೆಂದಿರುವ ಅವಲಕ್ಕಿ ಮತ್ತು ಹೆಸರು ಬೇಳೆಯ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಕೈಯಾಡಿಸಿ.

ಈಗ ಘಮ ಘಮಿಸುವ ರುಚಿಯಾದ ಅವಲಕ್ಕಿ ಪೊಂಗಲ್ ಹುಣಸೇ ಗೊಜ್ಜು, ಕಾಯಿ ಚಟ್ನಿ ಅಥವಾ ಮೊಸರು ಜೊತೆ ಸವಿಯಲು ಸಿದ್ಧ.

ಹುಣಸೇ ಗೊಜ್ಜು –
ಒಂದು ನಿಂಬೆಹಣ್ಣಿನ ಗಾತ್ರದಷ್ಟು ಹುಣಸೆ ಹಣ್ಣನ್ನು ನೆನೆಸಿ ರಸವನ್ನು ಮಾತ್ರ ಒಂದು ಸಣ್ಣ ಪಾತ್ರೆಗೆ ಹಾಕಿಕೊಂಡು ಸಣ್ಣ ಚೂರು ಬೆಲ್ಲ, ಉಪ್ಪು ಮತ್ತು 1 ಚಮಚ ರಸಂ ಪುಡಿ ಹಾಕಿ ಚೆನ್ನಾಗಿ ಕುದಿಸಿ.

ಸಾಸಿವೆ, ಜೀರಿಗೆಯ ಒಗ್ಗರಣೆ ಕೊಡಿ. ಇದನ್ನು ಪೊಂಗಲ್ ಮತ್ತು ಅನ್ನದ ಜೊತೆ ಸವಿಯಬಹುದು.