ಬಾಳೆಹಣ್ಣಿನ ಹಲ್ವಾ ಎಂದರೆ ಸಾಕು ಬಾಯಲ್ಲಿ ನೀರೂತ್ತದೆ.. ಇಂತಹ ಹಲ್ವಾವನ್ನು ಮಾಡುವುದು ಹೇಗೆ ಅಂತ ನೋಡೋಣ.
ಇದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳು:
ಬಾಳೆಹಣ್ಣು 7-8, ಸಕ್ಕರೆ 8 ಕಪ್, ತುಪ್ಪ 6 ಕಪ್, ಏಲಕ್ಕಿ ಸ್ವಲ್ಪ, ಲವಂಗ ಸ್ವಲ್ಪ, ಗೋಡಂಬಿ
ಮಾಡುವುದು ಹೇಗೆ?
ಮೊದಲು ಬಾಳೆಹಣ್ಣಿನ ಸಿಪ್ಪೆ ತೆಗೆದು, ಚಿಕ್ಕದಾಗಿ ಹೆಚ್ಚಿಕೊಳ್ಳಿ.

RELATED ARTICLES  ಯಕ್ಷಗಾನ ಕಲೆ.ಸಾಮಾನ್ಯ ಅವಲೋಕನ.

ಅದನ್ನ ಕಿವಿಚಿ ಅಥವಾ ಮಿಕ್ಸಿಮಾಡಿ

ದಪ್ಪವಾದ ಪಾತ್ರಯನ್ನುಸ್ಟೌ ಮೇಲಿಟ್ಟು ಅದಕ್ಕೆ ತುಪ್ಪಹಾಕಿ. ಬಿಸಿಮಾಡಿ.

ಉರಿಯನ್ನ ಸಣ್ಣ ಫ್ಲೇಂನಲ್ಲಿಟ್ಟು ಕಿವಿಚಿದ ಬಾಳೆಹಣ್ಣು ಮತ್ತು ಸಕ್ಕರೆಯನ್ನ ಹಾಕಿ

ಅದನ್ನು ಚೆನ್ನಾಗಿ ತಿರುವುತ್ತ ಇರಿ. ನಂತರ ನಡುನಡುವೆ ತುಪ್ಪ ಹಾಕಿ.

RELATED ARTICLES  ದೇಶವಿಖ್ಯಾತ ವಾಲಗಳ್ಳಿ "ಮೆಟ್ಟು"

ಸುಮಾರು ಹೊತ್ತು ತಿರುವಿದ ಬಳಿಕ ಗಟ್ಟಿಯಾಗುತ್ತ ಬರತ್ತೆ. ಕಂದು ಬಣ್ಣಕ್ಕೆ ತಿರುಗತ್ತೆ.

ತಳಬಿಟ್ಟು ಕಡುಕಂದು ಬಣ್ಣಕ್ಕೆ ಬರುವಾಗ ತುಪ್ಪ ಸವರಿದ ಪ್ಲೇಟ್ಗೆ ಹಾಕಿ.

ನೀಟಾಗಿ ಸ್ಪ್ರೆಡ್ ಮಾಡಿ. ಬೇಕಾದ ಶೇಪ್ಗೆ ಕಟ್ ಮಾಡಿ.

ಆರಿ ತಣ್ಣಗಾದ ಮೇಲೆ ಸವಿಯಿರಿ.