“ಪಾವ್‌ಬಾಜಿ”
ಬೇಕಾಗುವ ಸಾಮಗ್ರಿ
4 ಬೇಯಿಸಿದ ಆಲೂಗಡ್ಡೆ
2 ಈರುಳ್ಳಿ
ಅರ್ಧ ಕಪ್ ಹೂಕೋಸು
1 ಕಪ್ ಬಟಾಣಿ 3 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
8 ಪಾವ್
2 ಚಮಚ ಬೆಳ್ಳುಳ್ಳಿ ಪೇಸ್ಟ್
1/4 ಕಪ್ ಬೀನ್ಸ್
4 ಟೊಮೆಟೊ
1 ಕ್ಯಾಪ್ಸಿಕ
1/4 ಕಪ್ ಕ್ಯಾರೆಟ್
2-3 ಚಮಚ ಹಸಿ ಮೆಣಸಿನಕಾಯಿ
25 ಗ್ರಾಂ ಬೆಣ್ಣೆ
2 ಚಮಚ ಪಾವ್‌ಬಾಜಿ ಮಸಾಲ
1 ನಿಂಬೆಹಣ್ಣು
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಸ್ಟೆಪ್ 1
ಬಟಾಣಿ, ಹೂಕೋಸು, ಕ್ಯಾರೆಟ್ ಮತ್ತು ಬೀನ್ಸ್ ಕತ್ತರಿಸಿ ಬೇಯಿಸಿ, ನಂತರ ನೀರು ಬಸಿದು ಅವುಗಳನ್ನು ಮ್ಯಾಶ್ ಮಾಡಿ.
(ಬಸಿದ ನೀರನ್ನು ತೆಗೆದಿಡಿ)
ಸ್ಟೆಪ್ 2
ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ ಈರುಳ್ಳಿ ಹಾಗೂ ಹಸಿ ಮೆಣಸು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ಮಾಡಿ. ಈಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಪಾವ್ ಬಾಜಿ ಮಸಾಲ, ಚಿಕ್ಕದಾಗಿ ಕತ್ತರಿಸಿದ ಕ್ಯಾಪ್ಸಿಕಂ ಹಾಕಿ 2-3 ನಿಮಿಷ ಫ್ರೈ ಮಾಡಿ.
ಸ್ಟೆಪ್ 3
ಟೊಮೆಟೊದ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ, ಟೊಮೆಟೊವನ್ನು ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಫ್ರೈ ಮಾಡಿ. ಎಣ್ಣೆಯಿಂದ ಮಸಾಲೆಯಿಂದ ಬಿಟ್ಟು ಮೇಲ್ಭಾಗಕ್ಕೆ ತೇಲಲಾರಂಭಿಸಿದಾಗ ಮ್ಯಾಶ್ ಮಾಡಿದ ತರಕಾರಿ ಹಾಕಿ, ಬಸಿದ ನೀರು ಹಾಕಿ ಬೇಯಿಸಿ. ಬಾಜಿ ಸ್ವಲ್ಪ ಗಟ್ಟಿಯಾಗಲಿ.
ಸ್ಟೆಪ್ 4
ಈಗ ತವಾ ಬಿಸಿ ಮಾಡಿ ಅದಕ್ಕೆ ಬೆಣ್ಣೆ ಹಾಕಿ, ಪಾವ್ ಬಿಸಿ ಮಾಡಿ.
ಸ್ಟೆಪ್ 5
ರೆಡಿಯಾದ ಪಾಜಿಯನ್ನು ತಟ್ಟೆಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ, ಒಂದು ತುಂಡು ನಿಂಬೆ ಹಣ್ಣು ಇಟ್ಟು, ಪಾವ್ ಜತೆ ಸರ್ವ್ ಮಾಡಿ.