ಬೇಕಾಗುವ ಸಾಮಾಗ್ರಿಗಳು:
* 3 ಕಪ್ ಕುದಿಸಿದ ಗಟ್ಟಿಯಾದ ಹಾಲು
* 1 ಚಮಚ ಶುಂಠಿ ಪೇಸ್ಟ್
* 1/2 ಚಮಚ ಚಕ್ಕೆ ಪುಡಿ
* 3 ಚಮಚ ಸಕ್ಕರೆ ( ಬೇಕಿದ್ದರೆ)
* ಪೀಚ್ ಹಣ್ಣು
ತಯಾರಿಸುವ ವಿಧಾನ:
1. ಪೀಚ್ ಹಣ್ಣು ಜೊತೆ ಶುಂಠಿ ಮತ್ತು ಚಕ್ಕೆ ಹಾಕಿ ಮಿಕ್ಸಿಯಲ್ಲಿ ಗಟ್ಟಿಯಾಗಿ ಅರೆಯಬೇಕು.
2. ಇದಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಒಂದು ಗಂಟೆ ಫ್ರಿಜ್ ನಲ್ಲಿಟ್ಟರೆ ರುಚಿಕರ, ಆರೋಗ್ಯಕರ ಮತ್ತು ತಂಪಾದ ಶುಂಠಿ ಸೂಪ್ ರೆಡಿ.
ಈ ಮೇಲಿನ ಸಾಮಾಗ್ರಿಗಳನ್ನು ಹಾಕಿ 4 ಗ್ಲಾಸ್ ಸೂಪ್ ತಯಾರಿಸಬಹುದು.