ಬೇಕಾಗುವ ಸಾಮಗ್ರಿಗಳು
ಬದನೆಕಾಯಿ (ಚಿಕ್ಕದು) ೪-೫
ಈರುಳ್ಳಿ ೨
ಉಪ್ಪು ಸ್ವಲ್ಪ
ಅರಿಶಿನ ಸ್ವಲ್ಪ
ಎಣ್ಣೆ ಸ್ವಲ್ಪ
ಸಾಸಿವೆ ಸ್ವಲ್ಪ
ಕಡಲೇಕಾಯಿ ಬೀಜದ ಪುಡಿ(ಶೇನ್ಗ) ೩-೪ ಟೇಬಲ್ ಸ್ಪೂನ್
ಟೊಮೇಟೊ ೨
ಖಾರದ ಪುಡಿ ೨ ಟೀ ಚಮಚ
ಹುಣಸೆಹಣ್ಣಿನ ರಸ ೧ ಟೀ ಚಮಚ
ಮಾಡುವ ವಿಧಾನ
ಒಂದು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಂಡು ಅದಕ್ಕೆ ಚಿಕ್ಕದ್ದಾಗಿಹೆಚ್ಚಿಕೊಂಡ ಟೊಮೇಟೊ, ಕಡಲೇಕಾಯಿ ಬೀಜದ ಪುಡಿ, ಉಪ್ಪು, ಹುಣಸೆಹಣ್ಣಿನ ರಸ ಮತ್ತು ಖಾರದ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ನಾಲ್ಕು ಭಾಗಗಳಾಗಿ ಕಟ್ ಮಾಡಿಟ್ಟುಕೊಂಡಬದನೆಕಾಯಿಯೊಳಗೆ ತುಂಬಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ, ಅರಿಶಿನ, ಹಾಗು ಉದ್ದಕೆ ಹೆಚ್ಚಿಕೊಂಡ ಈರುಳ್ಳಿ ಹಾಕಿ, ಈರುಳ್ಳಿ ಕಂಡು ಬಣ್ಣಬರುವವರೆಗೆ ಸ್ವಲ್ಪ ಹುರಿಯಿರಿ. ಇದಕ್ಕೆ ಮಸಾಲೆ ತುಂಬಿದಬದನೇಕಾಯಿ ಹಾಕಿ ಸ್ವಲ್ಪ ನೀರು ಹಾಕಿ ಬದನೇಕಾಯಿ ಬೇಯುವ ವರೆಗೆಚೆನ್ನಾಗಿ ಬೇಯಿಸಿ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿರಿ.
(ಇದೇ ರೀತಿ ಹೀರೆಕಾಯಿ, ಸೌತೆಕಾಯಿ, ಬೆಂಡೆಕಾಯಿ, ದಪ್ಪಮನಸಿನಕಾಯಿ ಯಲ್ಲೂ ಮಾಡಬಹುದು).