ಬೇಕಾಗುವ ಸಾಮಗ್ರಿಗಳು:

ಈರುಳ್ಳಿ – 1 ಕಪ್
ಮೆಂತೆ ಸೊಪ್ಪು – 3-4 ಕಪ್ (ಹೆಚ್ಚಿದ್ದು)
ಮೊಳಕೆ ಬರಿಸಿದ ಹೆಸರುಕಾಳು – 1 ½ ಕಪ್
ಟೊಮೇಟೊ – ¼ ಕಪ್
ಮಸಾಲೆಗೆ:
ಕೊತ್ತಂಬರಿ ಬೀಜ – 3 ಚಮಚ
ಜೀರಿಗೆ – 1 ಚಮಚ
ಮೆಂತೆ – 10 ಕಾಳು
ಬ್ಯಾಡಗಿ ಮೆಣಸಿನಕಾಯಿ – 8-10
ಬೆಳ್ಳುಳ್ಳಿ – 3 ದೊಡ್ಡ ಎಸಳು
ಹಳದಿ – ಸ್ವಲ್ಪ
ತೆಂಗಿನ ತುರಿ – 1- 1 ½ ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ

RELATED ARTICLES  "ತಂಪಾದ ಶುಂಠಿ ಸೂಪ್"

ಮಾಡುವ ವಿಧಾನ:

ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಹಾಗು ಮೆಣಸನ್ನು ಬೇರೆ ಬೇರೆಯಾಗಿ ಸ್ವಲ್ಪ ಎಣ್ಣೆ ಹಾಕಿ ಘಮ್ ಎನ್ನುವ ತನಕ ಹುರಿಯಬೇಕು. ಇದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ತೆಗೆದು ಇಟ್ಟುಕೊಳ್ಳಬೇಕು. ನಂತರ ತೆಂಗಿನ ತುರಿ ಹಾಗು ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿಯನ್ನು ಸೇರಿಸಿ, ನೀರು ಹಾಕದೆ ಮಿಕ್ಸಿಯಲ್ಲಿ 10 ಸೆಕೆಂಡ್ ರುಬ್ಬಬೇಕು. ತೆಂಗಿನ ತುರಿ ಸ್ವಲ್ಪ ಸಣ್ಣಗಾದರೆ ಸಾಕು, ಹೆಚ್ಚು ನುಣ್ಣಗೆ ಆಗಬಾರದು. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಇದರಲ್ಲಿ ಈರುಳ್ಳಿಯನ್ನು 2 ನಿಮಿಷ ಹುರಿದುಕೊಂಡು, ಹೆಸರುಕಾಳನ್ನು ಸೇರಿಸಿ ½ ಕಪ್ ನೀರು ಹಾಗು ಟೊಮೇಟೊ, ಸೇರಿಸಿ, 15- 20 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಬೇಕು. ಕೊನೆಯಲ್ಲಿ, ಸಣ್ಣಗೆ ಕಟ್ ಮಾಡಿದ ಸೊಪ್ಪು, ಉಪ್ಪು, ತೆಂಗಿನಕಾಯಿ ಹಾಗು ಮಸಾಲೆ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷ ಬೇಯಿಸಿ, ಒಗ್ಗರಣೆ ಸೇರಿಸಿದರೆ, ಪಲ್ಯ ಸಿದ್ದ. ಕೊನೆಯಲ್ಲಿ ಸ್ವಲ್ಪ ಕಹಿ ಅನಿಸಿದರೆ, 1ಚಮಚ ಸಕ್ಕರೆ/ಬೆಲ್ಲ ಸೇರಿಸಬಹುದು.

RELATED ARTICLES  ಬೆಂಡೆ ಕಾಯಿ ಮಜ್ಜಿಗೆ ಹುಳಿ ಮತ್ತು ಗೋರಿಕಾಯಿ ಬೇಳೆ ಉಸಲಿ ಮಾಡೋದು ಹೇಗೆ?