ಬೇಕಾಗುವ ಸಾಮಗ್ರಿಗಳು:
ಈರುಳ್ಳಿ – 2-3 ಕಪ್ (ಉದ್ದಕ್ಕೆ ಹೆಚ್ಚಿದ್ದು)
ಕಡಲೆ ಹಿಟ್ಟು – 5-6 ಟೇಬಲ್ ಚಮಚ
ಅಕ್ಕಿ ಹಿಟ್ಟು – 1 ಟೇಬಲ್ ಚಮಚ
ಕಾರ್ನ್ ಫ್ಲೋರ್ – 1 ಟೇಬಲ್ ಚಮಚ
ಜೀರಿಗೆ – 1 ಚಮಚ
ಕೆಂಪು ಮೆಣಸಿನ ಪುಡಿ – ½ – ¾ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಸೋಡಾ ಪುಡಿ – ¼ ಚಮಚ
ಹಿಂಗು – ಸ್ವಲ್ಪ
ಕೊತ್ತಂಬರಿ ಸೊಪ್ಪು – 2 ಚಮಚ (ಸಣ್ಣಕೆ ಹೆಚ್ಚಿದ್ದು)
ಪಾಲಕ್ ಸೊಪ್ಪು – 2 ಟೇಬಲ್ ಚಮಚ (ಸಣ್ಣಕೆ ಹೆಚ್ಚಿದ್ದು)
ಎಣ್ಣೆ
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ, ಮೇಲಿನ ಎಲ್ಲ ಸಾಮಗ್ರಿಗಳನ್ನು ಹಾಕಿಕೊಂಡು ಚೆನ್ನಾಗಿ ಕೈಯಿಂದ ಮಿಕ್ಸ್ ಮಾಡಿಕೊಳ್ಳಬೇಕು. ಈರುಳ್ಳಿಯಲ್ಲಿರುವ ನೀರು ಬಿಟ್ಟುಕೊಳ್ಳುವ ಕಾರಣ, ಇದಕ್ಕೆ ನೀರು ಸೇರಿಸಬಾರದು. ಕೊನೆಯಲ್ಲಿ ಬೇಕಿದ್ದರೆ ಸ್ವಲ್ಪ ನೀರನ್ನು ಕೈಗೆ ಸವರಿಕೊಂಡು, ಸಣ್ಣ ಗಾತ್ರದಲ್ಲಿ ಹಿಟ್ಟನ್ನು ತೆಗೆದುಕೊಂಡು, ಕಾದ ಎಣ್ಣೆಗೆ ಹಾಕಿ, ಕೆಂಬಣ್ಣ ಬರುವ ತನಕ ಕರಿಯಬೇಕು.
ಇದನ್ನು ಅಕ್ಕಿ ಹಿಟ್ಟು, ಕಾರ್ನ್ ಫ್ಲೌರ್, ಸೋಡಾ ಪುಡಿ, ಪಾಲಕ್ ಸೊಪ್ಪು ಹಾಗು ಕೊತ್ತಂಬರಿ ಸೊಪ್ಪು ಹಾಕದೆ ಕೂಡ ಮಾಡಬಹುದು.