ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ಕ್ಯಾರೆಟ್ ತುರಿ,
ಎರಡು ಕಪ್ ಹಾಲು,
ಸಕ್ಕರೆ ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ,
ತುಪ್ಪ
ಸ್ವಲ್ಪ ಕೇಸರಿ ದಳ (ಬೇಕಿದ್ದರೆ)
ತಯಾರಿಸುವ ವಿಧಾನ:
ತುರಿದ ಕ್ಯಾರೆಟನ್ನು ಎರಡು ಚಮಚ ತುಪ್ಪದಲ್ಲಿ ಸ್ವಲ್ಪ ಹುರಿದುಕೊಳ್ಳಿ. ನಂತರ ಅದಕ್ಕೆ ಹಾಲು ಹಾಕಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ ತಳ ಹಿಡಿಯದಂತೆ ಮದ್ಯೆ ಮದ್ಯೆ ತಿರುವುತ್ತಿರಿ. ಬೇಗ ತಳ ಹತ್ತುತ್ತದೆ, ಸರಿಯಾಗಿ ತಿರುವುತ್ತಿರಿ, ಇಲ್ಲ ಅಂದರೆ ಹಲ್ವ ಸೀದ ವಾಸನೆ ಬರುತ್ತದೆ. ಕ್ಯಾರೆಟ್ ತುರಿ ಬೆಂದ ನಂತರ ಸಕ್ಕರೆ ಹಾಕಿ ಅದು ಕರಗುತ್ತಿದ್ದಂತೆಯೇ ಚೆನ್ನಾಗಿ ಹೊಂದಿಕೊಳ್ಳುವಂತೆ ಬೆರೆಸಿ .ಕೇಸರಿ ಹಾಕುವುದಾದರೆ ಅದನ್ನು 2 ಚಮಚ ಹಾಲಿನಲ್ಲಿ ಮೊದಲೆ ನೆನೆಸಿಟ್ಟು,ಈಗ ಹಾಕಿ. ಮತ್ತೆರಡು ಚಮಚ ತುಪ್ಪ ಸೇರಿಸಿ.ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ ಗೋಡಂಬಿ ಸೇರಿಸಿ.ಚೆನ್ನಾಗಿ ಬೆರೆಸಿ. ಕ್ಯಾರೆಟ್ ಹಲ್ವ ರೆಡಿ.
ಟಿಪ್ಸ್:
ಮೈಕ್ರೋವೆವ್ ಇರುವವರು – ಹುರಿದ ಮೇಲೆ ಕ್ಯಾರೆಟ್ ಮತ್ತು ಹಾಲನ್ನು ಸೇಫ್ ಡಿಶ್ ಗೆ ಹಾಕಿ ಬೇಯಿಸಿಕೊಳ್ಳಿ ಮತ್ತು ಬೆಂದ ಮೇಲೆ ಅದಕ್ಕೆ ಸಕ್ಕರೆ ಹಾಕಿ ಮತ್ತೆ ಕುಕ್ ಮಾಡಿ, ಆಮೇಲೆ ತುಪ್ಪ, ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ. ಇದು ತುಂಬಾ ಸುಲಭ ತಳಹತ್ತುವ ಭಯ ಇರಲ್ಲ, ಬೇಗ ಕೂಡ ಆಗುತ್ತದೆ.
ಮೈಕ್ರೋವೆವ್ ಇಲ್ಲದಿರುವವರು- ಕುಕ್ಕರ್ ನಲ್ಲಿ ಬೇಯಿಸಿಕೊಂಡು ತಯಾರಿಸಬಹುದು.