ಜೋಳದ ಚಿಪ್ಸ್ ರುಚಿ ನೋಡಿದ್ದೀರಾ? ಸಾಮಾನ್ಯವಾಗಿ ಪಾಪ್ ಕಾರ್ನ್, ಸುಟ್ಟ ಜೋಳ, ಬೇಯಿಸಿದ ಜೋಳ, ಜೋಳದ ರೊಟ್ಟಿ ಹೀಗೆ ಅನೇಕ ಬಗೆಯಲ್ಲಿ ಜೋಳವನ್ನು ರುಚಿ ನೋಡಿರುತ್ತೇವೆ. ಜೋಳದಿಂದ ಹೊಸ ರುಚಿ ನೋಡಲು ಬಯಸಿದರೆ ಇಲ್ಲಿದೆ ನೋಡಿ ಜೋಳದ ಚಿಪ್ಸ್ ರೆಸಿಪಿ. ಇದನ್ನು ತಯಾರಿಸುವ ವಿಧಾನ ಸುಲಭವಾಗಿದ್ದು , ತಿನ್ನಲು ತುಂಬಾ ರುಚಿಕರವಾಗಿರುತ್ತದೆ, ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು:
* 100 ಗ್ರಾಂ ಜೋಳದ ಹಿಟ್ಟು
* 50ಗ್ರಾಂ ಮೈದಾ ಹಿಟ್ಟು
* ರುಚಿಗೆ ತಕ್ಕ ಉಪ್ಪು
* ಎಣ್ಣೆ ಬಡಿಸಲು (for serving):
* 2 1/4 ಕಪ್ ಜೋಳದ ಚಿಪ್ಸ್
* ಮುಕ್ಕಾಲು ಕಪ್ ಸಾಲ್ಸಾ ಡಿಪ್
* ಕತ್ತರಿಸಿದ ಹಸಿಮೆಣಸಿನ ಕಾಯಿ 2
* 3 ಚಮಚ ತುರಿದ ಚೀಸ್
* ರುಚಿಗೆ ತಕ್ಕ ಉಪ್ಪು

RELATED ARTICLES  ಕೆಲವು ಟಿಪ್ಸ

ಜೋಳದ ಚಿಪ್ಸ್ ತಯಾರಿಸುವ ವಿಧಾನ:

ಜೋಳ ಮತ್ತು ಮೈದಾದ ಹಿಟ್ಟಿಗೆ ಒಂದು ಚಮಚ ಬಿಸಿ ಎಣ್ಣೆ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಬೇಕು. ನಂತರ ಬಿಸಿ ನೀರು ಹಾಕಿ ಹಿಟ್ಟನ್ನು ಹದವಾಗಿ ಕಲಿಸಬೇಕು. ಹಿಟ್ಟು ನೀರಾಗಬಾರದು. ಹದವಾಗಿರಬೇಕು. ನಂತರ ಹಿಟ್ಟಿನಿಂದ ತೆಳ್ಳಗಿನ ರೋಲ್ ರೀತಿ ಮಾಡಿ ಸುರುಳಿಯಾಕಾರದಲ್ಲಿ ಮಾಡಿ ಕುದಿಯುತ್ತಿರುವ ಎಣ್ಣೆಗೆ ಹಾಕಬೇಕು.ಚಿಪ್ಸ್ ಕಂದು ಬಣ್ಣ ಬರುವಾಗ ಅದನ್ನು ಎಣ್ಣೆಯಿಂದ ತೆಗೆದು ಅದರ ಮೇಲೆ ಸ್ವಲ್ಪ ಉಪ್ಪು ನೀರನ್ನು ಚಿಮುಕಿಸಬೇಕು. ರುಚಿಕರವಾದ ಜೋಳದ ಚಿಪ್ಸ್ ತಿನ್ನಲು ಸಿದ್ಧವಾಗುತ್ತದೆ.

RELATED ARTICLES  ಡ್ರೈ ಫ್ರೂಟ್ಸ್‌ ಜಾಮೂನ್‌