ಕಾಳುಗಳಿಂದ ಸಾರು, ಪಲ್ಯ, ಗ್ರೇವಿ ಮಾತ್ರವಲ್ಲ ಸಾಯಾಂಕಾಲದ ‘ಟೀ’ಗೆ ರುಚಿಕರವಾದ ತಿಂಡಿ ತಯಾರಿಸಬಹುದು. ಸಾಮಾನ್ಯವಾಗಿ ಹೆಸರುಕಾಳು, ಕಡಲೆ ಇವುಗಳನ್ನು ಬೇಯಿಸಿ ತೆಂಗಿನ ಕಾಯಿ ಒಗ್ಗರಣೆ ಹಾಕಿ ಸಾಯಾಂಕಾಲದ ತಿಂಡಿಯಾಗಿ ತಿನ್ನಲಾಗುವುದು.
ಬೀನ್ಸ್ ಸುಂಡಲ್ ತಯಾರಿಸುವ ವಿಧಾನ
ಬೇಕಾಗುವ ಸಾಮಾಗ್ರಿಗಳು:
* ಬೀನ್ಸ್ ಒಂದು ಕಪ್
* ಕತ್ತರಿಸಿದ ಈರುಳ್ಳಿ ಒಂದು
* ಬೆಳ್ಳುಳ್ಳಿ 4-5 ಎಸಳು
* ಸಾಸಿವೆ ಅರ್ಧ ಚಮಚ
* ಕಡಲೆ ಬೇಳೆ ಅರ್ಧ ಚಮಚ
* ಉದ್ದಿನ ಬೇಳೆ ಅರ್ಧ ಚಮಚ
* ಕರಿ ಬೇವಿನ ಎಲೆ
* ಕೊತ್ತಂಬರಿ ಸೊಪ್ಪು 3
*ಮೆಣಸಿನ ಪುಡಿ ಅರ್ಧ ಅಥವಾ ಒಂದು ಚಮಚ
* ಚಿಟಿಕೆಯಷ್ಟು ಅರಿಶಿಣ ಪುಡಿ
* ರುಚಿಗೆ ತಕ್ಕ ಉಪ್ಪು
* ಎಣ್ಣೆ
ತಯಾರಿಸುವ ವಿಧಾನ:
ಬೀನ್ಸ್ ಅನ್ನು 5-6 ಗಂಟೆ ನೀರಿನಲ್ಲಿ ನೆನೆ ಹಾಕಬೇಕು.
ನಂತರ ಪ್ರೆಷರ್ ಕುಕ್ಕರ್ ನಲ್ಲಿ ಬೀನ್ಸ್, ಬಯಲು ನೀರು ಹಾಕಿ, ಸ್ವಲ್ಪ ಉಪ್ಪು ಸೇರಿಸಿ 2 ವಿಷಲ್ ಬರುವವರೆಗೆ ಬೇಯಿಬೇಕು. ನಂತರ ಬೀನ್ಸ್ ನಲ್ಲಿರುವ ನೀರನ್ನು ಸೋಸಿ, ಬೀನ್ಸ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದಿಡಬೇಕು. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಉದ್ದಿನ ಬೇಳೆ, ಕಡಲೆ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೇಯಿಸಿದ ಬೀನ್ಸ್ ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರ ಮಾಡಿದರೆ ರುಚಿಕರವಾದ ಬೀನ್ಸ್ ಸುಂಡಲ್ ರೆಡಿ.
ಇದನ್ನು ಬಿಸಿಬಿಸಿಯಾಗಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.