ಬಿಸಿಬೇಳೆ ಭಾತ್ ಕರ್ನಾಟಕದ ಪ್ರಸಿದ್ಧ ಮತ್ತು ವಿಶಿಷ್ಟವಾದ ಆರೋಗ್ಯಕರವಾದ ಖಾದ್ಯ. ಸಾಮಾನ್ಯವಾಗಿ ಇದನ್ನು ತೊಗರಿಬೇಳೆ, ಅಕ್ಕಿ ಮತ್ತು ತರಕಾರಿಗಳಿಂದ ಮಾಡಲಾಗುತ್ತದೆ.

ಬೇಕಾಗುವ ಸಾಮಗ್ರಿಗಳು:

• ಅಕ್ಕಿ ೨ ಕಪ್
• ತೊಗರಿ ಬೇಳೆ ೧ ಕಪ್
• ತರಕಾರಿಗಳು (ಬೀನ್ಸ್, ಕ್ಯಾರೆಟ್, ಬಟಾಣಿ, ಆಲೂಗಡ್ಡೆ, ಹೂ ಕೋಸು)
• ಉಪ್ಪು
• ಹುಣಸೆ ರಸ ೧/೨ ಕಪ್
• ಖಾರದ ಪುಡಿ ೧ ಟೇಬಲ್ ಚಮಚ
• ಮಸಾಲೆ ಪುಡಿ ೧ ಟೇಬಲ್ ಚಮಚ
• ಅರಿಶಿನ ೧ ಟೀ ಚಮಚ
• ಉದ್ದಿನ ಬೇಳೆ ೧ ಟೇಬಲ್ ಚಮಚ
• ಕಡಲೆಬೇಳೆ ೧ ಟೇಬಲ್ ಚಮಚ
• ಕಡಲೆ ಬೀಜ ೨ ಟೇಬಲ್ ಚಮಚ
• ಗೋಡಂಬಿ ೨ ಟೇಬಲ್ ಚಮಚ
• ಕರಿಬೇವು
• ಕೊತ್ತಂಬರಿ
• ತುಪ್ಪ ೩ ಚಮಚ
• ಎಣ್ಣೆ ೪ ಟೇಬಲ್ ಚಮಚ
• ಬೆಲ್ಲ ೧ ಟೇಬಲ್ ಚಮಚ
• ಸಾಸಿವೆ ೧ ಟೀ ಚಮಚ
• ಈರುಳ್ಳಿ ೧
• ಟೊಮೇಟೊ ೧
• ಕಾಯಿತುರಿ ೧/೨ ಕಪ್

RELATED ARTICLES  ರುಚಿಕರವಾದ ಆಲೂಪಲಾವ್.

ಮಾಡುವ ವಿಧಾನ: ಮೊದಲು ಅಕ್ಕಿ ಹಾಗು ಬೇಳೆಯನ್ನು ಸ್ವಲ್ಪ ಜಾಸ್ತಿ ನೀರು ಹಾಕಿ ಬೇಯಿಸಿಟ್ಟುಕೊಳ್ಳಿ. ತರಕಾರಿಗಳನ್ನು ಬೇರೆಯಾಗಿ ಬೇಯಿಸಿಟ್ಟುಕೊಳ್ಳಿ. ಖಾರದ ಪುಡಿ, ಮಸಾಲೆ ಪುಡಿ, ಹುಣಸೆರಸ ಹಾಗು ಕಾಯಿತುರಿಯನ್ನು ರುಬ್ಬಿಕೊಳ್ಳಿ. ಈಗ ಎಣ್ಣೆ ಕಾಯಲು ಇಟ್ಟು ಅದಕ್ಕೆ ಸಾಸಿವೆ, ಅರಿಶಿನ, ಉದ್ದಿನ ಬೇಳೆ , ಕಡಲೆ ಬೇಳೆ , ಕರಿಬೇವು, ರುಬ್ಬಿದ ಮಿಶ್ರಣ , ಬೆಲ್ಲ, ಕಡಲೆ ಬೀಜ ಹಾಕಿ ೨ ನಿಮಿಷ ಚೆನ್ನಾಗಿ ಬೇಯಿಸಿ, ಇದಕ್ಕೆ ಬೆಂದ ತರಕಾರಿಗಳನ್ನು ಹಾಕಿ, ಬೇಕಾದಲ್ಲಿ ಇನ್ನಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಇದಕ್ಕೆ ಬೆಂದ ಅನ್ನ ಹಾಗು ಬೇಳೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಯಲ್ಲಿ ಉಪ್ಪು, ಕೊತ್ತಂಬರಿ ಸೊಪ್ಪು, ತುಪ್ಪದಲ್ಲಿ ಹುರಿದ ಗೋಡಂಬಿ ಹಾಗು ತುಪ್ಪ ಹಾಕಿ. ಬೂಂದಿ ಕಾಳು ಹಾಗು ಆಲೂಗಡ್ಡೆ ಚಿಪ್ಸ್ ಅಥವಾ ರಾಯತದ (ಮೊಸರು ಬಜ್ಜಿ) ಜೊತೆ ಬಿಸಿಯಾಗಿ ಸವಿಯಲು ನೀಡಿ.

RELATED ARTICLES  ಸಿಂಪಲ್ ಈರುಳ್ಳಿ ಬಜೆ ಆಹಾ!!