ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿಯಾದ, ಸುವಾಸಿತವಾದ, ಹೆಚ್ಚಾಗಿ ಭೋಜನದ ಬಳಿಕ ತಿನ್ನುವ ತಿನಿಸಾಗಿದೆ. ಇದು ಹೆಚ್ಚಾಗಿ ಹಬ್ಬ, ವಿಶೇಷ ದಿನದಂದು ತಯಾರಿಸುತ್ತಾರೆ. ಪಾಯಸ ತುಂಬಾ ಮುಖ್ಯ ತಿನಿಸಾಗಿದ್ದು, ಇದನ್ನು ಮಗುವಿನ ಅನ್ನಪ್ರಾಶನದಲ್ಲೂ ಬಳಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ. ಅದರಲ್ಲೂ ಈ ಗೋದಿ ತರಿ(ಕಡಿ) ಪಾಯಸ ತುಂಬಾ ರುಚಿಯಾದ ತಿನಿಸು.

RELATED ARTICLES  ರುಚಿಕರವಾದ 'ಬಾದಾಮಿ ಗುಲಾಬಿ ಕುಲ್ಫಿ.'

ಬೇಕಾಗುವ ಸಾಮಗ್ರಿಗಳು

ಗೋದಿ ತರಿ 1 ಕಪ್
ಬೆಲ್ಲ 1.5 ರಿಂದ 2 ಕಪ್
ಹಾಲು 1 ಕಪ್
ತುಪ್ಪ 1 ಚಮಚ
ಗೋಡಂಬಿ,ದ್ರಾಕ್ಷಿ, ಪಿಸ್ತಾ ಸ್ವಲ್ಪ
ಯಾಲಕ್ಕಿ ಸ್ವಲ್ಪ

ಮಾಡುವ ವಿಧಾನ

ಮೊದಲು ಗೋದಿ (ಕಡಿ) ತರಿಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ ನಂತರ ಗೋದಿ ತರಿಯನ್ನು ಕುಕ್ಕರನಲ್ಲಿ ಬೇಯಿಸಿಕೊಳ್ಳಿ ಬೆಂದ ನಂತರ ಅದಕ್ಕೆ ಬೆಲ್ಲ ಹಾಗು ಹಾಲು ಹಾಕಿ ಕುದಿಸಿ ಆಮೇಲೆ ಇದಕ್ಕೆ ಏಲಕ್ಕಿ ಪುಡಿ,ಗೋಡಂಬಿ ದ್ರಾಕ್ಷಿ ಪಿಸ್ತಾ ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿ ಕೈಯಾಡಿಸಿ. ಪಾಯಸ ಸವಿಯಲು ಸಿದ್ಧ .

RELATED ARTICLES  ಸುಲಭವಾಗಿ ಮಾಡಿ ರುಚಿಕರವಾದ ಚಾಕಲೇಟ್.