ಬೇಕಾಗುವ ಪದಾರ್ಥಗಳು:
ಚಿರೋಟಿ ರವೆ 1/4 ಕಪ್
ಮೈದಾ ಹಿಟ್ಟು 1/4 ಕಪ್ ಗಿನ ಸ್ವಲ್ಪ ಕಮ್ಮಿ
ಅಕ್ಕಿ ಹಿಟ್ಟು ಒಂದು ಕಪ್
ಉಪ್ಪು ರುಚಿಗೆ ತಕ್ಕಷ್ಟು
1 ಚಮಚ ಓಂ ಕಾಳು
ಪುಡಿ ಇಂಗು ಅರ್ಧ ಚಮಚ
ತೆಂಗಿನ ಕಾಯಿ ತುರಿ ಅರ್ಧ ಕಪ್
ಬ್ಯಾಡಗಿ ಮೆಣಸಿನ ಕಾಯಿ ಹತ್ತು
ಮಾಡುವ ವಿಧಾನ:
ತೆಂಗಿನಕಾಯಿ ಮತ್ತು ಮೆಣಸಿನಕಾಯಿಯನ್ನು ಹಾಕಿ ಹಾಗೇ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ನಂತರ ಎರಡು ಚಮಚ ನೀರು ಹಾಕಿ ತರಿಯಾಗಿ ರುಬ್ಬಿ
(ರುಬ್ಬಿದ್ದು ಗಟ್ಟಿಯಾಗಿ ಇರಲಿ )
ಒಲೆ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ಮೈದಾ ಮತ್ತು ಚಿರೋಟಿ ರವೆಯನ್ನು ಹಾಕಿ ಸ್ವಲ್ಪ ಬೆಚ್ಚಗೆ ಹುರಿದುಕೊಳ್ಳಿ( ತುಂಬಾ ಹುರಿಯುವುದು ಬೇಡ )
ಒಂದು ಪಾತ್ರೆಯಲ್ಲಿ ನಾವು ಬೆಚ್ಚಗೆ ಹುರಿದಿದ್ದ ಮೈದಾ ಮತ್ತು ಚಿರೋಟಿ ರವೆಯನ್ನು ಹಾಕಿ ಅದು ಬಿಸಿ ಇರುವಾಗಲೇ ಒಂದು ಚಮಚ ಎಣ್ಣೆ ಹಾಕಿ ಕೈಯಲ್ಲಿ ಚೆನ್ನಾಗಿ ಕಲೆಸಿಕೊಳ್ಳಿ ಹತ್ತು ನಿಮಿಷ ಹಾಗೇ ಇರಲಿ ನಂತರ ಅದಕ್ಕೆ ಅಕ್ಕಿ ಹಿಟ್ಟನ್ನು ಮತ್ತು ರುಬ್ಬಿದ ಮಿಶ್ರಣ ,ಪುಡಿ ಇಂಗು ,ಉಪ್ಪು ಓಂ ಕಾಳು ಹಾಕಿ ಚೆನ್ನಾಗಿ ಕೈಯಲ್ಲಿ ಕಲಸಿಡಿ.
ಅದಕ್ಕೆ ಈಗ ಐದು ಚಮಚ ಬಿಸಿ ಎಣ್ಣೆಯನ್ನು ಹಾಕಿ( ಚುರ್ ಅಂತ ಶಬ್ದ ಬರಬೇಕು ಬಿಸಿ ಇರುವುದರಿಂದ ಕೈಯಲ್ಲಿ ಮಿಕ್ಸ್ ಮಾಡಬೇಡಿ ) ಒಂದು ಚಮಚದಲ್ಲಿ ಆ ಹಿಟ್ಟನ್ನು ಹಾಗೇ ಚೆನ್ನಾಗಿ ಕಲಸಿ ಪಕ್ಕಕ್ಕಿಡಿ ಸ್ವಲ್ಪ ಸ್ವಲ್ಪವನ್ನು ನೀರಿನಲ್ಲಿ ಕಲೆಸಿಕೊಂಡು ಕೋಡುಬಳೆ ಒತ್ತಿ ಕಾದ ಎಣ್ಣೆಯಲ್ಲಿ ಒಂದೊಂದಾಗಿ ತೆಗೆದು ಹಾಕಿ ಬಂಗಾರದ ಬಣ್ಣ ಬರುವವರೆಗೆ ಕರಿದು ಇಟ್ಟುಕೊಳ್ಳಿ . ರುಚಿಕರವಾದ ಕೋಡುಬಳೆ ಸವಿಯಲು ಸಿದ್ಧ .