ನಿಂತು ಹೋಗುವ ಮಾತು ಕತೆಗಳು -9
ತಾಯಿಗೆ ತನ್ನ ಮಗ ಇನ್ನೆಲ್ಲಿ ದಾರಿ ತಪ್ಪಿಹೋಗುತ್ತಾನೋ ಎಂಬ ಆತಂಕದಿಂದ ಏನಾದರೂ ಮಾಡಿ ಒಳ್ಳೆಯ ದಾರಿಗೆ ತರಬೇಕೆಂಬ ಆಸೆಯಿಂದ ಮಕ್ಕಳು ಎಷ್ಟೇ ಕಳ್ಳ ಸುಳ್ಳನಾದರೂ ಸಹ ತಾಯಿಯರು ಒಮ್ಮೆಲೇ ಒಪ್ಪಿಕೊಳ್ಳುವುದಿಲ್ಲ. ತಂದೆಯಾದರೂ ಸಹ ತನ್ನ ವಂಶಕ್ಕೆ ಕೆಟ್ಟ ಹೆಸರು ತರುತ್ತಿದ್ದಾನೆಂದು ತಕ್ಷಣ ತಿಳಿದು ನಂಬಿ ಅವನನ್ನು ಸರಿದಾರಿಗೆ ತರಲು ಪ್ರಯತ್ನಿಸಲು. ಮಗ ಮಾಡುವ ಕೆಲಸದಿಂದ ಅತೀ ಕೋಪಿಷ್ಟನಾಗಿ ದಂಡಿಸಲು ಹೋಗಬಹುದು. ಇದರಿಂದ ನಿಷ್ಠೂರವಾಗಿ ಮಗ ತಂದೆಯೊಡನೆ ಮಾತನಾಡಲು ಹಿಂಜರಿಯುತ್ತಾನೆ. ಕೆಲವು ಮಕ್ಕಳು ತಂದೆಯ ಮೇಲಿನ ಭಯದಿಂದ ಒಳ್ಳೆಯವನಾಗಲು ಪ್ರಯತ್ನಿಸಬಹುದು.
ಆದರೆ ತಾಯಿಗೆ ತನ್ನ ಮಗನ ಮೇಲಿನ ಕುರುಡು ವಾತ್ಸಲ್ಯದಿಂದ (ಎಂದರೆ ತಪ್ಪಾಗಲಾರದು) ಮಗನ ಪರ ವಹಿಸಿ ಮಾತನಾಡುತ್ತಾಳೆ. ಒಂದೊಂದು ಸಲ ತಾಯಿಗೆ ತನ್ನ ಮಗ ತಪ್ಪುದಾರಿಗೆ ಹೋಗುತ್ತಿದ್ದಾನೆ ಎಂಬ ಅರಿವಾಗುವ ಹೊತ್ತಿಗೆ ಮಗ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿರಬಹುದು. ಏಕೆಂದರೆ ತಾಯಿಯ ವಾತ್ಸಲ್ಯ ಅವನ ಬೆಂಬಲಕ್ಕೆ ಇರುತ್ತದೆ. ಏನು ಮಾಡಿದರೂ ತಾಯಿ ತನ್ನನ್ನು ಬಿಟ್ಟು ಕೊಡುವುದಿಲ್ಲ ಎಂಬ ನಂಬಿಕೆ ಬಂದಿರುತ್ತದೆ. ಆದ್ದರಿಂದ ಯಾವ ತಾಯಿಯಾದರೂ ಸಹ ತನ್ನ ಮಗ ಕೆಟ್ಟ ದಾರಿ ಹಿಡಿದಿದ್ದಾನೆ ಎಂದು ತಿಳಿದಾಕ್ಷಣ ಅವನನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕು. ಪುತ್ರ ವ್ಯಾಮೋಹದಿಂದ ವರ್ತಿಸಿದರೆ ಮಕ್ಕಳು ಕೈಗೆ ಸಿಗದಂತೆ ತಪ್ಪು ದಾರಿಗೆ ಹೋಗಬಹುದು. ಮಕ್ಕಳಿಗೂ ಸಹ ಯಾರು ಏನು ನಿಂದಿಸಿದರೂ ಕೆಟ್ಟ ಕೆಲಸ ಮುಂದುವರೆಸಿದ್ದರೂ ಸಹ ತಾಯಿ ಏನಾದರೂ ನಿಂದಿಸಿದರೆ ಆ ತಾಯಿಯ ಮಾತು ಮಾತ್ರ ಎದೆಗೆ ಶೂಲ ಹಾಕಿದಂತೆ ಆಗುತ್ತದೆ.
ಮಕ್ಕಳು ಸ್ನೇಹಿತರ ಸಹವಾಸದಿಂದ ಕುಡಿಯುವುದನ್ನು ಕಲಿತರೆ ತಾಯಿಯಾದವಳಿಗೆ ಸಹಿಸಲಾರದ ಸಂಕಟ ಉಂಟಾಗಬಹುದು. ಮನೆಗೆ ಬಂದು ತಾಯಿ ಎನ್ನುವುದನ್ನು ನೋಡದೆ ಜಗಳವಾಡಿ ನಿಂದಿಸಿ ದಿನ ನಿತ್ಯವೂ ಕಾಟ ಕೊಡುತ್ತಿದ್ದರೆ ಮಾತು ನಿಲ್ಲಿಸಬಹುದು.
ಎನ್ ಮುರಳೀಧರ್ ವಕೀಲರು ಹಾಗೂ ಸಾಹಿತಿ ಲೇಖಕರು ನೆಲಮಂಗಲ (ಮುರಳಿಮಂಗಲಧರೆ)