ಮೆಣಸಿನ ಕಾಳು ‘ಮಸಾಲೆಗಳ ರಾಜ‘ ಉಪಯೋಗಿಸಿ ಮಾಡಿದ ತಿಳಿ ಸಾರು ಬಾಯಲ್ಲಿ ನೀರೂರಿಸುತ್ತದೆ. ನೆಗಡಿ ಮತ್ತು ಗಂಟಲು ನೋವಿಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಮೆಣಸಿನ ಸಾರು/ ರಸಂ ತಯಾರಿಸುವುದು ತುಂಬಾ ಸುಲಭ. ಈ ಸಾರು ಮಕ್ಕಳಿಗೆ ಮತ್ತು ವಯಸ್ಕರಲ್ಲಿ ಶೀತ ಮತ್ತು ಕೆಮ್ಮೆನ್ನು ಗುಣಪಡಿಸಲು ಪರಿಹಾರವಾಗಿದೆ.
ಮೆಣಸಿನ ಸಾರುಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ,ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಮತ್ತು ಮೊದಲ ಹಂತದಲ್ಲಿ ಜ್ವರ ,ಕೆಮ್ಮು, ಶೀತ ಗುಣಪಡಿಸಲು ಉತ್ತಮಪರಿಹಾರವಾಗಿದೆ. ಈ ರುಚಿಕರವಾದ ರಸಂ ಮಕ್ಕಳು ಅಥವಾ ವಯಸ್ಕರು ಬೇಡ ಎಂದು ನಿರಾಕರಿಸುವುದಿಲ್ಲ .
ಬೇಕಾಗುವ ಸಾಮಾನುಗಳು:
1/2 ಚಮಚ
ಕಾಳು ಮೆಣಸು
1 ಚ. ಜೀರಿಗೆ,
ಬೆಲ್ಲದ ಪುಡಿ,
4 ಬೆಳ್ಳುಳ್ಳಿ ಎಸಳು,
1/4 ಚ.ಅರಸಿನ,
1ಚ. ಸಾಸಿವೆ,
ತುಪ್ಪ, ರುಚಿಗೆ
ತಕ್ಕಷ್ಟು ಉಪ್ಪು,
ನಿಂಬೆ ಗಾತ್ರದಷ್ಟು
ಹುಣಸೆ ಹುಳಿ,
10ಎಸಳು ಬೇವಿನೆಲೆ,
ಚಿಟಿಕಿ ಇಂಗು.
ತಯಾರಿಸುವ ವಿಧಾನ :
*ಮೊದಲಿಗೆ ಜೀರಿಗೆ
ಮತ್ತು ಕಾಳು
ಮೆಣಸನ್ನು ಕುಟ್ಟಿ
ಪುಡಿ ಮಾಡಿಕೊಳ್ಳಿ.
*ಹುಣಸೆ ಹಣ್ಣನ್ನು ಕಾಲು ಲೋಟ ಬಿಸಿ ನೀರಿನಲ್ಲಿ ಹತ್ತು ನಿಮಿಷ ನೆನೆಸಿ ಇಟ್ಟು, ಬಳಿಕ ಅದನ್ನು ಹಿಂಡಿ ರಸ ಬೇರ್ಪಡಿಸಿ ಇಟ್ಟುಕೊಳ್ಳಿ.
*ನಾಲ್ಕು ಲೋಟ ನೀರು ಬಿಸಿ ಮಾಡಿ ಅದರಲ್ಲಿ ಜೀರಿಗೆ,ಕಾಳು ಮೆಣಸಿನ ಪುಡಿ,ಹುಣಸೆ ರಸ ,ಬೆಲ್ಲ ಹಾಕಿ ಕುದಿಸಿ.
* ಒಗ್ಗರಣೆ ಸೌಟಿನಲ್ಲಿ ತುಪ್ಪ, ಸಾಸಿವೆ,ಅರಸಿನ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ, ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ ಇಂಗು,ಬೇವಿನೆಲೆ ಹಾಕಿ ಕಲಕಿ,
*ಕುದಿಯುತ್ತಿರುವ ಕಾಳು ಮೆಣಸು, ಜೀರಿಗೆ ನೀರಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಕಿ
*ಇನ್ನೂ ಎರಡು ನಿಮಿಷ ಕುದಿಸಿ,ಒಲೆ ಆರಿಸಿ. ನಾಲಿಗೆಗೆ ರುಚಿ, ದೇಹಕ್ಕೆ ಹಿತವಾದ ಕಾಳು ಮೆಣಸು-ಜೀರಿಗೆ ಸಾರು ಸವಿಯಬಹುದು..