ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ ,ಪುಣೆ

ಹೀಗಿರುವಾಗ ನಾನು ಇದರಲ್ಲಿ ಹೇಳುವದೇನಿದೆ?
(ಇಸವಿ ಸನ ೧೯೪೬ರಲ್ಲಿ ಕುಮಾರಿ ರಾಧಾಳ ತಂದೆಗೆ ಅವಳ ಲಗ್ನದ ಸಂದರ್ಭದಲ್ಲಿ ಬರೆದ ಪತ್ರದ ಮುಂದುವರಿದ ಮೂರನೆಯ ಭಾಗ)

ಮನಸ್ಸಿನ ಕಿರಿಕಿರಿಯಿಂದ ಪತ್ರ ಬರೆದಿರುವೆ. ನಿನ್ನ ಪರಿಸ್ಥಿತಿಯಲ್ಲಿ ಹೀಗಾಗುವದು ಸಹಜವೇ. ನಿನ್ನ ಮೇಲೆ ಆಕ್ಷೇಪ ತೆಗೆಯುವಂತಿಲ್ಲ. ಇಲ್ಲಿಯವರೆಗೆ ಪರಿಸ್ಥಿತಿಯನ್ನು ವಿಚಾರ ಮಾಡದೇ ಈಗ ಮಾತನಾಡಾದರೂ ಏನು ಪ್ರಯೋಜನ? ದೇವರೇ ನೋಡಲಿ! ನಿನ್ನ ಬಗ್ಗೆ ನಿನಗೇನು ಅನಿಸುತ್ತದೆಯೋ ಆ ರೀತಿ ನಿನ್ನ ಭಾವೀ ಜೀವನವಾಗದೇ, ಆ ಪ್ರಸಂಗ ನಿವಾರಣೆಯಾಗಿ, ಆಧ್ಯಾತ್ಮದ ಹೆಚ್ಚಿನ ಸುಖ ಅನುಭವಿಸುತ್ತ ನಿನಗೆ ನಿನ್ನ ಉಳಿದೆಲ್ಲ ಆಯುಷ್ಯ ನಿನ್ನ ಪತ್ನಿಯೊಂದಿಗೆ ಸುಖ ಸಮಾಧಾನದಿಂದ ಕಳೆಯಲಿ!
ವಿಧಿಲಿಖಿತ ಬಹಳ ವಿಲಕ್ಷಣವಿರುತ್ತದೆ. ಬಹುತೇಕ ಜನರಿಗೆ ಅದರ ಪ್ರಕಾರವೇ ನಡೆಯಬೇಕಾಗುತ್ತದೆ. ‘ದೈವೀ ವಿಚಿತ್ರಾ ಗತಿಃ’. ಏನು ಯಾರ ಅದೃಷ್ಟದಲ್ಲಿ ಬರೆದಿದೆಯೋ ಅದು ಆ ವೇಳೆಗೆ ಸರಿಯಾಗಿ ಆಗುತ್ತದೆ. ‘ಭವಿತವ್ಯ ಭವತ್ಯೇವ ನಾರಿಕೇಳ ಫಲಾಂಬುವತ್| ಗಂತವ್ಯಂ ಗಚ್ಛತಿ ಸದಾ ಗಜಭುಕ್ತಕಪಿತ್ಥವತ್|
ನನಗೆ ಬಂದ ಚಿ. ರಘುನಾಥನ ಪತ್ರದಲ್ಲಿನ ವಿಷಯ –
Before I have consented for marriage, I was convinced of the deep love that Radha had towards me. She indicated this by her gestures. Before my departure, I had a heart to heart talk with Radha and both of us have heartily agreed for the marriage.
ಇನ್ನು, ಇದು ನಿನ್ನ ಪತ್ರದಲ್ಲಿನ ವಿಷಯ –
ಚಿ.ರಾಧಾಬಾಯಿಯ ಲಗ್ನಸಂಬಂಧದಲ್ಲಿ ಅವಳ ವಿಚಾರ ತೆಗೆದುಕೊಂಡ ನಂತರವೇ ಅದರ ಮುಂದಿನ ಕಾರ್ಯಕ್ಕೆ ಪ್ರವೃತ್ತನಾದೆ. ನಾನು ಯಾವುದೇ ರೀತಿಯಿಂದ ನನ್ನ ‘ಅಪ್ಪ’ನೆಂಬ ಅಧಿಕಾರ ಮಾಡಲಿಲ್ಲ.
ಮಂಗಳೂರಿನ ಮೊದಲ ಭೆಟ್ಟಿಯಲ್ಲಿ ನೀವು ಬಂದ ಕಾರಣ ಹೇಳುವಾಗ ‘ಹುಡುಗ-ಹುಡುಗಿ ಸ್ವಇಚ್ಛೆಯಿಂದಲೇ ನಿರ್ಣಯಿಸಿದ ಮದುವೆಯ ನಿಶ್ಚಯ ಮಾಡಲಿಕ್ಕೆ ನಾನು ಉಡುಪಿಗೆ ಹೋಗುತ್ತಿದ್ದೇನೆ’ ಎಂದು ನೀನು ಹೇಳಿದ್ದೆ. ಹೀಗಿರುವಾಗ ನಾನು ಇದರಲ್ಲಿ ಹೇಳುವದೇನಿದೆ?
(ಪತ್ರದ ಮುಂದಿನ ಭಾಗ ಮುಂದುವರಿಯುವದು)

RELATED ARTICLES  ಎಳ್ಳಿನಲ್ಲಿ ಬಾಯಿಯ ದುರ್ವಾಸನೆ ಹೋಗಲಾಡಿಸುವ ಔಷಧಿಯ ಗುಣವಿದೆ!