ಅಕ್ಷರರೂಪ:ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್. ಪುಣೆ
‘ಕಠೋರ ಪ್ರಾರಬ್ಧದ ‘ಪೆಟ್ಟು’ ಜೀವಿಗಳ ಮೇಲೆ ಆಗುವದೆಲ್ಲವೂ ಅನಿವಾರ್ಯವೇ ಇರುತ್ತದೆ’ ಎಂಬುದು ರಾಮಕೃಷ್ಣಾದಿಗಳ ಅವತಾರಗಳ ಚರಿತ್ರೆಗಳಿಂದಲೂ ಕಂಡುಬರುತ್ತದೆ.
(ಇಸವಿ ಸನ ೧೯೪೬ರಲ್ಲಿ ಸೌ. ರಾಧೆಯ ತಂದೆ-ತಾಯಿಯವರಿಗೆ ರಾಧೆಯ ಲಗ್ನಕಾರ್ಯಕ್ರಮಗಳು ಮುಗಿದ ನಂತರ ಬರೆದ ಪತ್ರ)
||ಓಂ||
ಸ್ವರ್ಗಾಶ್ರಮ
ಚಿ.ರಾಮಭಾವು ಮತ್ತು ಚಿ.ಸೌ. ಸೀತೆಗೆ ಆಶೀರ್ವಾದ,
ಶ್ರೀ ಬದರೀಕಾಶ್ರಮದಲ್ಲಿ ಮೂರು ತಿಂಗಳು ಇದ್ದೆ. ನಂತರ ಶ್ರೀ ಮಹಾದೇವಜೀ ಹೆಸರಿನ ಒಬ್ಬ ಬ್ರಹ್ಮನಿಷ್ಠ ಸಂನ್ಯಾಸಿಯ ಅತಿ ಆಗ್ರಹದಿಂದಾಗಿ ಆತನೊಂದಿಗೆ ಆತನ ಸ್ಥಳಕ್ಕೆ ಹೋಗಿ, ಸ್ವರ್ಗಾಶ್ರಮ ತಲುಪಿ ಇಂದಿಗೆ ೭-೮ ದಿನಗಳೇ ಕಳೆಯಿತು. ಋಷಿ-ಮುನಿಗಳಿಗೆ ಪೂರ್ವಕಾಲದಿಂದಲೂ ಇಲ್ಲಿಯ ಈ ಪ್ರಾಂತ ಅಂದರೆ ನಿರಂಕುಶ ಆತ್ಮಶಾಂತಿ ಕೊಡುವದೆಂದೇ ಪ್ರಸಿದ್ಧವಿದೆ. ನಾನು ಸಧ್ಯ ಎಲ್ಲಿದ್ದೇನೋ ಆ ಸ್ವರ್ಗಾಶ್ರಮ ಏಕಾಂತದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವದಕ್ಕೆ ಎಲ್ಲ ದೃಷ್ಟಿಯಿಂದ ಅತ್ಯಂತ ಅನುಕೂಲ ಮತ್ತು ಸುಂದರ ಸ್ಥಳವಾಗಿದೆ. ಒಟ್ಟಿನಮೇಲೆ ಇಲ್ಲಿಯ ಈ ಪ್ರಾಂತ ಅಂದರೆ ಸಾತ್ವಿಕ ಸೃಷ್ಟಿ ಸೌಂದರ್ಯಗಳ ಆತ್ಮಶಾಂತಿದಾಯಕ ಒಂದು ರಮ್ಯ ದೃಶ್ಯವೇ ಆಗಿದೆ.
ನನ್ನ ದರ್ಶನ ನಿಮಗೆ ಆತ್ಮರೂಪದಿಂದ ನಿತ್ಯವೂ ಇದೆ. ಆ ನಿತ್ಯನಿರ್ವಿಕಾರ, ಸುಶಾಂತ ಮತ್ತು ಶಾಶ್ವತ ಆನಂದರೂಪದೆಡೆ ದೃಷ್ಟಿ ತಿರುಗಿಸಿ ಪ್ರಾರಬ್ಧದಿಂದ ಪ್ರಾಪ್ತವಾದ ದಿನಗಳನ್ನು ಮಧುರ ಮಾಡಿಕೊಳ್ಳಬೇಕು. ಯಾರಿಗಾದರೂ ಯಾವ ದೃಷ್ಟಿಯಿಂದಲೂ ತೊಂದರೆಯಾಗಬೇಕೆಂಬುದು ಅದೆಂತು ನನ್ನ ಇಚ್ಛೆ ಇರಬ!
‘ಕಠೋರ ಪ್ರಾರಬ್ಧದ ‘ಪೆಟ್ಟು’ ಜೀವಿಗಳ ಮೇಲೆ ಯಾವುದು ಆಗುತ್ತದೆಯೋ ಅದು ಅನಿವಾರ್ಯವಿರುತ್ತದೆ’ ಎಂಬುದು ರಾಮಕೃಷ್ಣಾದಿಗಳ ಅವತಾರದ ಚರಿತ್ರೆಗಳಿಂದಲೂ ಕಂಡುಬರುತ್ತದೆ. ‘ಆತ್ಮ-ಚಿರಶಾಂತಿಯಿಂದ ಪ್ರಾರಬ್ಧದ ದಿವಸಗಳನ್ನು ಕಳೆಯಬೇಕು’ ಎಂದೇ ವೇದಾಂತವೂ ಹೇಳುತ್ತದೆ. ತೀವ್ರ ಪ್ರಾರಬ್ಧ ಸ್ವಲ್ಪದರಲ್ಲೇ ಬಿಡುಗಡೆಯಾಗುವದಿಲ್ಲ.
ಆದರೆ ಶ್ರೀಗುರುದೇವತೆಯ ಅನುಗ್ರಹದಿಂದ ಆತ್ಮಶಾಂತಿ ಮಾತ್ರ ಆಗಲೂ ಇರಲು ಶಕ್ಯವಿದೆ.
ಎಲ್ಲಿ ‘ವಿಕಾರ’ ಎನ್ನುವದು ಕಾಲತ್ರಯವೂ ಇರುವದಿಲ್ಲವೋ ಅದೇ ನಿಮ್ಮ ನಿತ್ಯನಿರ್ವಿಕಲ್ಪವಾದ ಅದ್ವಿತೀಯ ಚಿದಾನಂದ ಸ್ವರೂಪವು.
ಎಲ್ಲ ದೃಷ್ಟಿಯಿಂದಲೂ ನಿಮ್ಮೆಲ್ಲರಿಗೆ ಅನುಕೂಲ ಸ್ಥಿತಿಯಾಗಲಿ.
ಎಲ್ಲರ ಮಂಗಲರೂಪಾತ್ಮ
ಶ್ರೀಧರ
ಅದೇ ಸಂದರ್ಭದಲ್ಲಿ ಮಾತೋಶ್ರೀ ರಾಧಾತಾಯಿಗೆ ಬರೆದ ಪತ್ರ
ಪ್ರಾರಬ್ಧ ನಿನ್ನನ್ನು ಗ್ರಹಸ್ಥಾಶ್ರಮಕ್ಕೆ ತಳ್ಳಿದರೂ ನಿನ್ನ ಆತ್ಮನಿಷ್ಠೆಯನ್ನು ಅಲುಗಾಡಿಸುವ ಸಾಮರ್ಥ್ಯ ಅದಕ್ಕಿಲ್ಲ.
ಸ್ವರ್ಗಾಶ್ರಮ
ಚಿ.ಸೌ. ರಾಧೆಗೆ ಆಶೀರ್ವಾದ,
ಮಗಾ, ನಿರಾಶಳಾಗಬೇಡ. ಪ್ರಾರಬ್ಧ ನಿನ್ನನ್ನು ಗ್ರಹಸ್ಥಾಶ್ರಮಕ್ಕೆ ತಳ್ಳಿದರೂ ನಿನ್ನ ಆತ್ಮನಿಷ್ಠೆಯನ್ನು ಅಲುಗಾಡಿಸುವ ಸಾಮರ್ಥ್ಯ ಅದಕ್ಕಿಲ್ಲ. ಭಾವನೆ, ಭೋಗ, ದೇಹ, ಆಶ್ರಮಧರ್ಮ-ಕರ್ಮ-ಸಂಸ್ಕಾರ ಮತ್ತು ಸಂಚಿತಗಳೆಲ್ಲವನ್ನೂ ಕೂಡಿಸಿಕೊಂಡೇ, ಇವೆಲ್ಲವನ್ನೂ ಪ್ರಕಾಶಿಸುತ್ತಲೇ ಇದ್ದು ಆದರೆ ಇವೆಲ್ಲಕ್ಕೂ ಅಸಂಗರೀತಿಯಲ್ಲಿ ಯಾವುದು ನಿನಗೆ ನಿತ್ಯ ನಿರ್ವಿಕಾರ ಸ್ವರೂಪ ನಿಜಬೋಧರೂಪದಲ್ಲಿ ಸ್ಫುರಣರೂಪವಾಗಿದೆಯೋ ಆ ಕಡೆಗೆ ನಿನ್ನ ವಿಶುದ್ಧ ವಿವೇಕದ ದೃಷ್ಟಿ ತಿರುಗಿಸು ಮತ್ತು ದೇಹದ ಪ್ರಾರಬ್ಧಗಳ ಕೇವಲ ಪ್ರಕಾಶಕನಾಗಿರುವ ಚಿದಾನಂದಬ್ರಹ್ಮನಾಗಿಯೇ ಇರು.
ನಿನ್ನ ನಿತ್ಯ ನಿರ್ವಿಕಾರ ಆತ್ಮ
ಶ್ರೀಧರ