ಅಕ್ಷರ ರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.

ಮನೆಯಲ್ಲಿ ಕಾಮಧೇನುವನ್ನಿಟ್ಟುಕೊಂಡು ಮಜ್ಜಿಗೆ ಬೇಡುವಂತೆ!’ …. ‘ಕಲ್ಪವೃಕ್ಷದ ಕೆಳಗೇ ನಿಂತು ದುಃಖ ಪಡುವಂತೆ!’ ಆಗಬಾರದು! ಎಚ್ಚೆತ್ತಿಕೋ! ಹೀಗೆಂದವರು ಶ್ರೀಧರರು.

(ಇಸವಿ ಸನ ೧೯೪೮ರಲ್ಲಿ ಸೌ. ರಾಧೆಗೆ ಬರೆದ ಪತ್ರ)

||ಶ್ರೀರಾಮ ಸಮರ್ಥ||
ಮಂಗಳೂರು
ದಿ. ೫-೪-೧೯೪೮
ಚಿ.ಸೌ.ರಾಧೆಗೆ ಆಶೀರ್ವಾದ
ಮಗಾ!
‘ನಮಃ ಶಾಂತಾಯ ….’ ಈ ಮಂತ್ರದ ಜಪ ನೀನೂ ಮಾಡು ಮತ್ತು ನಿನ್ನ ಯಜಮಾನರಿಗೂ ಮಾಡಲಿಕ್ಕೆ ಹೇಳಿದ್ದೇವೆಂದು ಹೇಳು! ಶ್ರೀಗುರು ನಮನದ ಈ ಮಂತ್ರ ಜಪದಿಂದ ಸದ್ಗುರು ಕೃಪೆಯಾಗುತ್ತದೆ ಮತ್ತು ನಂತರ ಎಲ್ಲವೂ ಸರಿಯಾಗುತ್ತದೆ! ಮನಸ್ಸಿಗೆ ಶಾಂತಿ ಸಿಗುತ್ತದೆ. ಈ ‘ನಮಃ ಶಾಂತಾಯ …’ ಮಂತ್ರದಿಂದ ಎಷ್ಟೋ ಜನರ ಎಲ್ಲ ಅರಿಷ್ಠಗಳೂ ಹೋಗಿವೆ. ಭಕ್ತಿಭಾವದಿಂದ ಜಪ ಮಾಡಿದರೆ ಅವರಿಗೆ ದೇವರ ಕೃಪೆಯಿಂದ ಎಲ್ಲವೂ ಅನುಕೂಲವಾಗುತ್ತದೆ. ಆಧ್ಯಾತ್ಮ ನಿಷ್ಠೆಯೂ ಹೆಚ್ಚುತ್ತದೆ. ನಿನಗೆ ಸಮಾಧಾನವಾಗಿ ಹೆದರಿಕೆಯಾಗುವದು ಮುಂತಾದ್ದೆಲ್ಲ ಬಿಟ್ಟಿಹೋಗುತ್ತದೆ. ಶ್ರೀ ಪಾದುಕೆಯೂ ಇದೆ. ಅದರ ಮಹತ್ವವೇನೂ ಹೋಗಿಲ್ಲ.
‘ಮನೆಯಲ್ಲಿ ಕಾಮಧೇನುವನ್ನಿಟ್ಟುಕೊಂಡು ಮಜ್ಜಿಗೆ ಬೇಡುವಂತೆ!’ …. ‘ಕಲ್ಪವೃಕ್ಷದ ಕೆಳಗೇ ನಿಂತು ದುಃಖ ಪಡುವಂತೆ!’ ಆಗಬಾರದು. ಎಚ್ಚೆತ್ತಿಕೋ!
ಗುರುಕೃಪೆಯಿಂದ ಸುಖರೂಪವಾಗಿರು! ….. ಎಲ್ಲರಿಗೂ ಆಶೀರ್ವಾದ!
ಎಲ್ಲರೂ ಸುಖವಾಗಿರಿ!
ಶ್ರೀಧರ

RELATED ARTICLES  'ವೆಜ್ ಆಮ್ಲೆಟ್'

 

೨. ಜ್ಞಾನವಿರಹಿತ ಸ್ಥಿತಿಯೆ ಕಾರಣ ಮನದ ತಳಮಳಕೇ!
(ಇಸವಿ ಸನ ೧೯೪೮ರಲ್ಲಿಯೇ ಸೌ. ರಾಧೆಗೆ ಬರೆದ ಇನ್ನೊಂದು ಪತ್ರ)

RELATED ARTICLES  ಸಂಕ್ರಾಂತಿಗೆ ಸಿಹಿತಿಂಡಿ ಅತ್ತಿರಸ! ಮಾಡಿ ಸವಿಯೋಣ ಬನ್ನಿ

||ಶ್ರೀರಾಮ ಸಮರ್ಥ||
ಮಂಗಳೂರು
೯-೬-೧೯೪೮
ಚಿ.ಸೌ.ರಾಧೆಗೆ ಆಶೀರ್ವಾದ,
ಮಗಾ,
ನಿನ್ನ ಪತ್ರ ತಲುಪಿತು. ಸ್ತೋತ್ರವನ್ನೂ ಓದಿದೆ. ಅಷ್ಟೇಕೆ ತಳಮಳ? ಜ್ಞಾನವಿರಹಿತ ಸ್ಥಿತಿಯಲ್ಲಿರುವಾಗ ತಳಮಳ ತೊಲಗಲಾರದು!

ಸಹಜಪೂರ್ಣ ಸ್ವರೂಪದಲಿ ಹಾನಿ-ಲಾಭವು ಇಲ್ಲ
ಏಕಮೇವಾದ್ವಿತೀಯದಲಿ ದುಃಖಕೆಣೆಯೆಲ್ಲಿ?

ಸ್ವರೂಪದ ಅನಂತದಲಿ ಕೊರತೆಯೊಂದೂ ಇಲ್ಲ
ನನಗರ್ಥವಾಗದದು; ಯಾಕೆ ಕೊರಗುತಿಹೆ?

ಕರಗಿ ಹೋಗಲಿ ಮನವು ನಿಜ ಆನಂದಘನದಲ್ಲಿ
ಮರೆಯದಿರು ‘ನಾನು’ ಎಂಬೀ ಸ್ಫೂರ್ತಿ ನಿನ್ನ ಮೂಲ!

ಸಕಲ ಭ್ರಾಂತಿಯ ಕಳಚಿ ಇರಲಾತ್ಮಶಾಂತಿಯು ಅಂತರಂಗದಿ
ಮಗುವೆ ಬೆಳಗಲಿ ಬ್ರಹ್ಮಕಾಂತಿಯು ನಿನ್ನ ಮುಖದಲ್ಲೀ

ಶ್ರೀಧರ