ಉತ್ತಮ ಜನ್ಮ ದೊರೆಯುವುದು ಇದುವೇ ಹರಿ ಕೃಪೆಯೈ. ಜನ್ಮ ಇಲ್ಲದಂತಾಗುವುದು ಇದುವೇ ಗುರು ಕೃಪೆಯೈ- ಕಬೀರ.
ನಮ್ಮ ಪಾಲಿಗೆ ಉತ್ತಮ ಜನ್ಮ ದೊರೆಯಬೇಕಾದರೆ ಅದಕ್ಕೆ ಹರಿ ಕೃಪೆ ಬೇಕೇ ಬೇಕು. ಆದರೆ ಮುಂದೆ ಜನ್ಮ ಇಲ್ಲದೆ ಮುಕ್ತಿ ದೊರೆಯಬೇಕು ಅಂತಾದರೆ ಅದಕ್ಕೆ ಗುರುಕೃಪೆ ಅಗತ್ಯ. ಎಂಬುದು ಸಂತ ಕಬೀರರ ಅಭಿಮತ.
ದೇವರ ಕೃಪೆಯಿಂದ ನಾವು ಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದಿದ್ದೇವೆ. ಅದನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಅದಕ್ಕೆ ದಾಸಶ್ರೇಷ್ಠರು ಹೇಳಿದ್ದು ಮಾನವ ಜನ್ಮ ದೊಡ್ಡದು ಅದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು. ಅದನ್ನು ಅರ್ಥೈಸಿಕೊಳ್ಳದ ನಾವು ಹೇಗೇಗೋ ವರ್ತಿಸುತ್ತೇವೆ. ಮಾನವ ಜನ್ಮವನ್ನು ವ್ಯರ್ಥ ಮಾಡಿಕೊಳ್ಳುತ್ತೇವೆ. ಹಾಗೆ ಮಾಡದೆ ಸದ್ಬುದ್ಧಿ ಸನ್ನಡತೆಗಳಿಂದ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಮುಕ್ತಿಯ ಮಾರ್ಗ ಗೋಚರಿಸುತ್ತದೆ. ತತ್ತ್ವ ಪದವೊಂದು ಹೇಳಿದ್ದು ಅದನ್ನೇ…………….... ಮಾನವ ಜನ್ಮ ಬಲು ಕೊಟ್ಟಿ ,ಸಾರ್ಥಕವೇನಾಯ್ತು ನೀ ಹುಟ್ಟಿ? ಯಾಕಾಗಬಾರದು ಗುರುವಿಗೆ ಭೆಟ್ಟಿ.
✍️ ರವೀಂದ್ರ ಭಟ್ಟ ಸೂರಿ