ಕರದಲಿ ಮಾಲೆಯು ತಿರುಗುವುದು. ಬಾಯಲಿ ನಾಲಿಗೆಯು.
ದಶದಿಶೆಯಲಿ ಮನ ತಿರುಗುವುದು. ಇದೇ ಇವರ ಜಪವು -ಕಬೀರ
ತೋರಿಕೆಯ ಭಕ್ತಿಯನ್ನು ಕುರಿತು ಕಬೀರರು ಈ ದೋಹೆಯಲ್ಲಿ ಹೇಳಿದ್ದಾರೆ. ಕೈಯಲ್ಲಿ ಜಪ ಮಣಿ ಸರ ತಿರುಗುತ್ತಿರುತ್ತದೆ. ಬಾಯಲ್ಲಿ ನಾಲಿಗೆ ಹೊರಳುತ್ತಿರುತ್ತದೆ. ಆದರೆ ಮನಸ್ಸು ಮಾತ್ರ ಹತ್ತು ದಿಕ್ಕಿನಲ್ಲಿ ತಿರುಗುತ್ತಿರುತ್ತದೆ. ಇಂತಹ ಡಂಭಾಚಾರದ ಜಪದಿಂದ ಏನು ಪ್ರಯೋಜನ ? ಎಂಬುದು ಸಂತ ಕಬೀರರ ಪ್ರಶ್ನೆ .
ಭಕ್ತಿ ಶ್ರದ್ಧೆ ಇರಬೇಕಾದದ್ದು ಅದು ಅಂತರಂಗದಲ್ಲಿ ಬಹಿರಂಗದಲ್ಲಲ್ಲ. ಬಹಿರಂಗದ ತೋರಿಕೆಯ ಡಂಭಾಚಾರದ ಭಕ್ತಿಗೆ ಯಾವುದೇ ಶಕ್ತಿ ಇಲ್ಲ . ಆ ಭಗವಂತ ಒಲಿಯುವುದು ಆಂತರ್ಯದ ಭಕ್ತಿಗೆ ಹಾಗಾಗಿ ಮನಸ್ಸನ್ನು ನಿಯಂತ್ರಿಸಿ
ಪರಮಾತ್ಮನಲ್ಲಿ ಕೇಂದ್ರೀಕರಿಸಿ ಏನೇ ಕಾರ್ಯ ಮಾಡಿದರೂ ಅದು ಅವನನ್ನು ತಲುಪುತ್ತದೆ ಎಂಬುದು ಕಬೀರರ ಅನಿಸಿಕೆ.
ಅದನ್ನೇ ಕವಿವಾಣಿಯೊಂದು ಹೇಳಿದ್ದು ಹೀಗೆ…………
ದೇವರ ಹೊರಗಡೆ ಹುಡುಕಿದರಲ್ಲ. ಯಾರಿಗೂ ಅವನು ಸಿಗಲೇ ಇಲ್ಲ. ದೇವರ ಎಲ್ಲೆಡೆ ಕಾಣುವರಿಲ್ಲ . ಒಳಗಡೆ ಶುದ್ಧಿಯು ಇಲ್ಲವೇ ಇಲ್ಲ .
ಡಾ.ರವೀಂದ್ರ ಭಟ್ಟ ಸೂರಿ.