ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ. ಪುಣೆ

 

‘ಇದೊಂದು ತಮಗೆ ಶರಣು ಬಂದ ಮೆಟ್ಟಲು ಕಲ್ಲು. ಸದ್ಗುರು ಮಾತೆ ಈ ಕಲ್ಲಿಗೆ ಒಂದು ದಿವ್ಯ ಮೂರ್ತಿಯ ಸ್ವರೂಪ ಮಾಡುವ ಹೊಣೆ ಹೊತ್ತಿದ್ದಾರೆ.’ ….. ಹೀಗೆ ಬರೆದ ಮೇಲೆ …. ಮತ್ತೇತರ ಚಿಂತೆ?’
(ಇಸವಿ ಸನ ೧೯೪೮ರಲ್ಲಿ ಶ್ರೀ ಅಯ್ಯಾ ಬುವಾ ರಾಮದಾಸಿಯವರ ಪತ್ರಕ್ಕೆ ಸ್ವಾಮಿಗಳ ಉತ್ತರ)

||ಶ್ರೀರಾಮ ಸಮರ್ಥ||
ಮಂಗಳೂರು
೨೮/೮/೧೯೪೮
ಚಿ.ಅಯ್ಯಾನಿಗೆ ಆಶೀರ್ವಾದ,
ನಿನ್ನ ಪತ್ರದಲ್ಲಿ ‘ತಮ್ಮಲ್ಲಿ ಶರಣ ಬಂದ ಇದು ಒಂದು ಮೆಟ್ಟಲು ಕಲ್ಲು. ಸದ್ಗುರು ಮಾತೆ ಈ ಕಲ್ಲಿಗೆ ಒಂದು ದಿವ್ಯ ಮೂರ್ತಿಯ ಸ್ವರೂಪ ಮಾಡುವ ಹೊಣೆ ಹೊತ್ತಿದ್ದಾರೆ.’ ಹೀಗೆ ಬರೆದದ್ದು ಅತ್ಯಂತ ಯಥಾರ್ಥವಾಗಿಯೇ ಇದೆ…. ಮತ್ತೇತರ ಚಿಂತೆ?’
ಮಾಯೆಯ ಮೋಡಿ ಅತಿ ವಿಚಿತ್ರವು| ಅದ ಗುರುತಿಸಿ ವಸ್ತು ಸಂಗವ ಬಿಡು ಸಾಧಕಾ|
ಮಾಯಾತೀತ ಅನಂತವನರಿಯಲು| ಸುಲಭ ಸಾಧನ ಸಂತ ವಚನವು ಸಾಧಕಾ||
(ಮುಂದುವರಿಸಿ ಸ್ವಾಮಿಗಳು ಕೊನೆಯ ಸಾಲಿನಲ್ಲೆನ್ನುತ್ತಾರೆ)
ಸಾಧಕನು ಭಕ್ತಿಯಿಂದಲೆ ನಮನ ಮಾಡಲು| ಅವನ ಚಿಂತೆಯ ಭಾರವೆಲ್ಲವು ಸಂತಗೆ|
ಸುಗಮಪಥದಲಿ ಕೊಂಡೊಯ್ದು ಬಿಡುವನು| ನೀನೆಲ್ಲಿರುವೆಯೋ ಅಲ್ಲಿಂದಲೇ||
ತಪಸ್ಸು ಮಾಡುವಾಗ ಕೆಲವು ನಿಯಮಗಳನ್ನು ಇಟ್ಟುಕೊಳ್ಳಬೇಕು; ಭಗವಂತನಿಗೆ ಭಕ್ತಿ-ಪ್ರೇಮದಿಂದ ಬೇಡಿಕೊಳ್ಳಬೇಕು; ಆಧ್ಯಾತ್ಮ ವಿಚಾರಗಳಿಂದ ಮನಸ್ಸಿನ ಶಾಂತಿಯನ್ನು ಯಾವಾಗಲೂ ಕಾಯ್ದುಕೊಳ್ಳಬೇಕು; ಆಚಾರ, ವಿಚಾರ ಮತ್ತು ಉಚ್ಚಾರ ಅತ್ಯಂತ ಮೃದು ಮತ್ತು ಉನ್ನತವಿರಬೇಕು.
ನಿನಗೆ ಸೇವೆಯ ಒಂದು ಸಂಧಿ ಹಿಂದೆ ಸಿಕ್ಕಿತ್ತು; ಮುಂದೂ ಯೋಗವಿದ್ದಂತೆ ಸಿಗುತ್ತದೆ. ನನ್ನ ಅಭಿಪ್ರಾಯದಲ್ಲಿ ಆತ್ಮತತ್ಪರತೆಯೇ ಆತ್ಮರೂಪ ಸದ್ಗುರುವಿನ ಅತ್ಯುತ್ಕೃಷ್ಟ ಸೇವೆ. ‘ಹೊಟ್ಟೆಯಲಿ ಅಮೃತ ಬಿದ್ದರೆ ಆಗ ಹೊರ ಶರೀರವೂ ಫಳ ಫಳ ಹೊಳೆಯುವದು’
ಪ್ರತಿಯೊಬ್ಬರಿಗೂ ಅವರವರ ಅಧಿಕಾರಕ್ಕೆ ತಕ್ಕಂತೆ ಎಲ್ಲವೂ ಸಾಧಿಸುತ್ತಾ ಹೋಗುತ್ತದೆ.
ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃಪದಮ್|
ಮಂತ್ರಮೂಲ್ಯಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃಕೃಪಾ|| ಗು.ಗೀತಾ.
ಅಸೋ ಶ್ರೀಗುರುಪದೀ ಅನನ್ಯತಾ| ತರೀ ತುಸೀ ಕಾಯರೇ ಚಿಂತಾ|
ವೆಗಳೇಪಣೇಂ ಅಭಕ್ತಾ| ಉರೋಚಿ ನಕೋ|| ಶ್ರೀಸಮರ್ಥ
ಶ್ರೀಗಾಯತ್ರೀಯ ಪುರಶ್ಚರಣ ಮಾಡುತ್ತಿರುವೆ ಎಂದು ತಿಳಿದು ಬಂತು. ಸರ್ವ ವೇದಗಳಲ್ಲಿ ಗಾಯತ್ರೀ ತುಂಬಾ ಉತ್ತಮವಾದದ್ದು. ಈಶ್ವರ ಕೃಪೆಯಿಂದ ನಿನ್ನ ಜನ್ಮ ಸಾರ್ಥಕವಾಗಿ ಕೃತಕೃತ್ಯನಾಗು.
ನಾನು ಸೋನಗಾಂವದಿಂದ ಶುಕ್ರವಾರ ಅಹಮದನಗರದ ಕೆ.ಪಿ.ಭಾಲೇರಾವ ಬಿ.ಎ.ಎಲ್.ಎಲ್.ಬಿ. ಪಬ್ಲಿಕ ಗೌರ್ನಮೆಂಟ ಪ್ಲೀಡರ ಮತ್ತು ಪಬ್ಲಿಕ ಪ್ರೊಸೆಕ್ಯೂಟರವರ ಕಡೆ ಭಿಕ್ಷೆಗೆ ಹೋಗುವನಿದ್ದೇನೆ. ಶನಿವಾರ ನಂತರ ಸಂಗಮನೇರದಿಂದ ಮುಂದೆ ನಾಸಿಕ ಮಾರ್ಗವಾಗಿ ಶ್ರೀ ಜಾಂಬೆಗೆ ಹೋಗಿ ನಿಜಾಮ ಇಲಾಖೆ ಕಡೆಗೆ ಹೋಗುವನಿದ್ದೇನೆ.
||ಸರ್ವೇ ಜನಾಃ ಸುಖಿನೋ ಭವಂತು||
ಇತಿಶಮ್
ಶ್ರೀಧರ
(ಮುಂದುವರಿಯುವದು)

RELATED ARTICLES  ರುಚಿಕರವಾದ ಆಲೂ ಮೆಂತೆ ಸೊಪ್ಪಿನ ಪಲ್ಯ.