ನವದೆಹಲಿ: ನೋಕಿಯಾ ಪ್ರೇಮಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, ಅತ್ಯಂತ ವಿಶ್ವಾಸಾರ್ಹ ಫೋನ್ ಎಂದೇ ಖ್ಯಾತಿಗಳಿಸಿದ್ದ 3310 ಮಾಡೆಲ್ ನ ಫೋನ್ ಗಳು ಶೀಘ್ರದಲ್ಲೇ ಮತ್ತೆ ಮಾರುಕಟ್ಟೆ ಪ್ರವೇಶಿಸಲಿವೆ ಎಂದು  ತಿಳಿದುಬಂದಿದೆ.ಸ್ಮಾರ್ಟ್ ಫೋನ್ ಯುಗಾರಂಭದ ಹೊತ್ತಿಗೆ ಸ್ಪರ್ಧೆ ತಾಳಲಾರದೇ ವ್ಯಾಪಕ ನಷ್ಟ ಅನುಭವಿಸಿದ್ದ ನೋಕಿಯಾ ಸಂಸ್ಥೆ ಮಾಲೀಕರು ಸಂಸ್ಥೆಯನ್ನು ಮೈಕ್ರೋಸಾಫ್ಟ್ ಸಂಸ್ಥೆಗೆ ಮಾರಿದ್ದರು. ಆದರೆ ನೋಕಿಯಾ ಹೆಸರನ್ನು ಮಾತ್ರ ಚೀನಾ  ಮೂಲದ ಹೆಚ್ ಎಂಡಿ ಗ್ಲೋಬಲ್ ಸಂಸ್ಥೆ ಖರೀದಿಸಿತ್ತು. ಇದೀಗ ಇದೇ ಸಂಸ್ಥೆ ನೋಕಿಯಾದ ಹಳೆಯ ಮೊಬೈಲ್ ಗಳನ್ನು ಪುನರ್ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಅದರಂತೆ ನೋಕಿಯಾ ಜನಪ್ರಿಯ ಮಾಡೆಲ್ ಗಳಾದ  ನೋಕಿಯಾ 1100, ನೋಕಿಯಾ 215, ನೋಕಿಯಾ 3310 ಸೇರಿದಂತೆ ವಿವಿಧ ಸರಣಿಯ ಮೊಬೈಲ್ ಗಳನ್ನು ಅದೇ ಮಾದರಿಯಲ್ಲಿ ಅದೇ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದಲ್ಲದೆ ನೂತನ  ನೋಕಿಯಾ 3, 5 ಮತ್ತು 6 ಸರಣಿಯ ಸ್ಮಾರ್ಟ್ ಫೋನ್ ಗಳನ್ನೂ ಕೂಡ ಬಿಡುಗಡೆ ಮಾಡಲು ಸಂಸ್ಥೆ ಎಂಡಬಲ್ಯೂಸಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದೆೆ. 

RELATED ARTICLES  ಸರಳವಾಗಿ ತಯಾರಾಗುತ್ತೆ ಸಿಹಿಗೆಣಸು ಡೋನಟ್!