ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ,ಪುಣೆ.
ಶರಣಾಗತರ ಸಕಲ ಚಿಂತೆಯ ಪರಿಹರಿಪನೊಬ್ಬನವನೆ ಸದ್ಗುರುದಾತಾ|
ಬಹು ಪ್ರಯತ್ನದಿ ಜಗದಿ ತಾಯಿ ಮಗುವನು ಬೆಳೆಪ ತೆರದಲ್ಲೀ||
(ಇಸವಿ ಸನ ೧೯೪೫ರಲ್ಲಿ ಡಾ|ರಮಾ ಮತ್ತು ಸುಶೀಲಾರವರಿಗೆ ಬರೆದ ಪತ್ರದ ಮುಂದುವರಿದ ಭಾಗ)
ದಾಸರು ಹೇಳಿದ್ದಾರೆ,
‘ನಿಶ್ಶೇಷವಾಗಿಯೆ ಮುರಿಯೆ ದುರಾಶೆಯ
ದೇವ ದರುಶನ ಕ್ಷಣಮಾತ್ರದಿ
ದುರಾಶೆ ಬಿಡದಿರೆ ಹೊಸ್ತಿಲು ಹಿಡಿದಿರೆ
ಶಬ್ದಜ್ಞಾನಿಯು ಕಾಮನೆಯ ಗೂಡು’
ಆದಾಗ್ಯೂ, ಪ್ರಪಂಚದಲ್ಲಿದ್ದಾಗ, ಪರಮಾರ್ಥ ಸಾಧಿಸಲು ಲೌಕಿಕವನ್ನೂ ಸುವ್ಯವಸ್ಥಿತವಾಗಿ ನಡೆಸಬೇಕೆಂದು ಅನಿಸುವದೇನೂ ತಪ್ಪೇನಲ್ಲ.
ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ
ಭದ್ರಂ ಪಶ್ಚ್ಯೇಮಾಕ್ಷಭಿರ್ಯ ಜತ್ರಾಃ|
ಸ್ಥಿರೈರಂಗೈಸ್ತುಷ್ಟುವಾಸ್ತನೂಭೀರ್ವ್ಯಶೇಮ
ದೇವ ಹಿತಂ ಯದಾಯುಃ||
ಈ ರೀತಿ ವೈದಿಕ ಪ್ರಾರ್ಥನೆ ಇದೆ.
ಸಮಾಧಾನಕಾರಕ – ಅಮೃತತುಲ್ಯ – ಪ್ರಗತಿಪರ ಮಾತು ಕಿವಿಗಳಿಂದ ಕೇಳಬೇಕು; ನಿರತಿಶಯ ಸುಖದಿಂದ ತೃಪ್ತವಾದ ಸರ್ವತೋಪರಿ ಅಂತರ್ಬಾಹ್ಯ ಸಮಾಧಾನಕಾರಕ ಪರಿಸ್ಥಿತಿಯಿಂದ ಮತ್ತು ಆಹ್ಲಾದಕಾರಕ ದೇಹದಿಂದ, ಉಪಾಸನೆಯ ಮಾರ್ಗದಲ್ಲಿ ತೇರ್ಗಡೆಹೊಂದಲು, ನಮ್ಮ ಸಂಪೂರ್ಣ ಜೀವನ ಸುಖದಿಂದ ಸಾಗಬೇಕು ಎಂದು ಈ ಪ್ರಾರ್ಥನೆಯ ಬಾವಾರ್ಥವಿದೆ.
ಮನಸ್ಸಿಗೊಪ್ಪುವಂತೆಯೇ ಆಗುತ್ತದೆ| ಸಮಸ್ಥ ವಿಘ್ನಗಳು ನಾಶವಾಗುತ್ತವೆ|
ರಘುನಾಥನ ಕೃಪೆಯೊಂದಿದ್ದರೆ| ಕೈಗೂಡಿ ಬಂದು ಕಣ್ಮುಂದೆ ಕಾಣುತ್ತದೆ||
ಚಿ.ತಾಯಿಗೆ ಮತ್ತು ರಾಜನಿಗಂತೂ ಸನ್ಯಾಸ ತೆಗೆದುಕೊಳ್ಳಬೇಕೆಂಬಂತೆ ಅನಿಸುತ್ತಿದೆ ಎಂದು ಬರೆದದ್ದು ಕಂಡುಬಂತು.
‘ಪರಮಾರ್ಥಿಯಾದರೋ ಸಾಮ್ರಾಜ್ಯವನ್ನಾಳುವವ| ಅವನಲ್ಲ ಭಿಕಾರಿ| ಆ ಪರಮಾರ್ಥದ ಪದ ಯಾರಿಗೆ ಕೊಡಲಿ?’
‘ದೇವತ್ವವಾದರೋ ನಿರ್ಗುಣ| ದೇವಪದದಲಿ ಅನನ್ಯತೆಯು| ಇದರರ್ಥವನರಿತು ಸಂಪೂರ್ಣ| ಸಮಾಧಾನ ಧರಿಸು||’
‘ಬಹುಜನ್ಮದಾ ಕೊನೆಯು| ದೇವ ಭಕ್ತರ ಸಂಗ|’
ಸಂನ್ಯಾಸ ಈ ಶಬ್ದದಿಂದ ನೆನಪಾಯಿತು. ‘ಸದಾ ಮನಸಿಸಂಜಾತಂವೇತುಷ್ಟ್ಯಂ ಸರ್ವ ವಸ್ತುಷು| ತದೈವ ಸನ್ಯಸೇದ್ವಿದ್ಧಾನ್ ಪತಿತಃ ಸ್ಯಾದಿ್ಧಪರ್ಯಯೇ||’
ಜಾಗತಿಕ ಸುಖ – ಸಂಪತ್ತು ಹೇವವೆನಿಸಿ, ಇಂದ್ರಿಯ ಸುಖ ಒಮ್ಮೆ ಮನದಾಳದಿಂದ ಅಸಹ್ಯವೆನಿಸಿತು ಅಂದರೆ ವಿದ್ವಾನರು ಸನ್ಯಾಸ ತೆಗೆದುಕೊಳ್ಳಬೇಕು. ಅಪ್ಪಿತಪ್ಪಿ ಭೋಗಾಸಕ್ತಿ ಉಳಿದು ಬಿಟ್ಟಿದ್ದರೆ ಆತನು ಪತಿತನಾಗುತ್ತಾನೆ. ಹೀಗೆ ಈ ಶ್ಲೋಕದಲ್ಲಿ ಹೇಳಿದ್ದಾರೆ. ಸಂನ್ಯಾಸದ ಭೂಮಿಕೆಯ ಮನುಷ್ಯರ ಧಾರಣೆ ಹೇಗಿರುತ್ತದೆ ಎಂದು ಈ ಮುಂದಿನ ಶ್ಲೋಕದಿಂದ ಅರ್ಥವಾಗುತ್ತದೆ.
‘ಅಹಮೇವಾಕ್ಷರಂ ಬ್ರಹ್ಮ ವಾಸುದೇವಾಖ್ಯಮದ್ವಯಂ| ಇತಿ ಭಾಸೋ ಧ್ರುವೋ ಯಸ್ಯ ಸ ಕೈವಲ್ಯಾಶ್ರಮೇ ವರೋತ್||’
ಸರ್ವ ಭೂತಗಳಲ್ಲಿ ಇರುವ ನಿತ್ಯ(ಅವಿನಾಶಿ) ಯಾವ ವಾಸುದೇವಾಖ್ಯ, ಏಕಮೇವಾದ್ವಿತೀಯ ಬ್ರಹ್ಮ ತತ್ವವೇ ನಾನಿದ್ದೇನೆ ಎಂದು ಯಾರಿಗೆ ತಮ್ಮ ಬಗ್ಗೆ ನಿಶ್ಚಿತವಾಗಿಯೂ ಅನಿಸುತ್ತದೆಯೋ, ಆತನೇ ತುರ್ಯಾಶ್ರಮಿಯಾಗಬೇಕು ಅಂದರೆ ಸನ್ಯಾಸ ತೆಗೆದುಕೊಳ್ಳಬೇಕು. ಹೀಗೆ ಈ ಶ್ಲೋಕದ ತಾತ್ಪರ್ಯವಿದೆ. ಇರಲಿ.
ಶರಣಾಗತರ ಚಿಂತೆಯನು ಪರಿಹರಿಪನೊಬ್ಬ ಅವನೆ ಸದ್ಗುರುದಾತಾ|
ಬಹು ಪ್ರಯತ್ನದಿ ಜಗದಿ ತಾಯಿ ಮಗುವನು ಬೆಳೆಪ ತೆರದಲ್ಲೀ||
|ಸರ್ವಾರಿಷ್ಟಶಾಂತಿರಸ್ತು|
ಶ್ರೀಧರ
(ಪತ್ರಸರಣಿ ಮುಂದುವರಿಯುವದು)