ಹಲಸಿನ ಕಾಯಿಯ ಸೊಳೆಯನ್ನು ತೆಗೆದ ನಂತರ ಬೇಳೆಯನ್ನು ಬಿಸಾಡಿಬಿಡುತ್ತೇವೆ. ಆ ಬೇಳೆಯನ್ನು ಚೆಲ್ಲುವ ಮೊದಲು ಅದರ ಮೇಲೆ ಒಂದು ತೆಳುವಾದ ಪದರವಿರುತ್ತದೆ. ಆ ಪದರವನ್ನೇ ಹೊದಿ ಗಡ್ಡೆ ಎನ್ನುತ್ತಾರೆ. ಈ ಹೊದಿಗಡ್ಡೆಯನ್ನು ಬೇಳೆಯಿಂದ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಬೇಕು.

ಒಂದು ಬಟ್ಟಲು ಹೆಚ್ಚಿದ ಹಲಸಿನ ಹೊದಿಗಡ್ಡೆ, ಒಂದು ಈರುಳ್ಳಿ, ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸು ಎರಡು, ಕೊತ್ತಂಬರಿ ಸೊಪ್ಪು, ಸಾಸಿವೆ, ಅರಿಶಿನ ಪುಡಿ, ಉದ್ದಿನ ಬೇಳೆ, ಸ್ವಲ್ಪ ತೆಂಗಿನ ಕಾಯಿ ತುರಿ.
ಪಾತ್ರೆಗೆ ಸ್ವಲ್ಪ ಹೆಚ್ಚಿಗೆ ಎಣೆಯನ್ನು ಹಾಕಿ ಉದ್ದಿನ ಬೇಳೆ, ಸಾಸಿವೆ ಹಸಿಮೆಣಸು ಈರುಳ್ಳಿಯನ್ನು ಚೆನ್ನಾಗಿ ಹುರಿದು ಬೆಳ್ಳುಳ್ಳಿ ಪೇಸ್ಟನ್ನು ಸೇರಿಸಿ ಅದಸು ಕಂದು ಬಣ್ಣಕ್ಕೆ ಬಂದ ನಂತರ ಅರಿಶಿಣ ಪುಡಿ ಚಿಟಕೆಯಷ್ಟು ಹಾಕಿ ಹಲಸಿನ ಹೊದಿಗಡ್ಡೆಯನ್ನು ಹಾಕಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಒಂದು ಟೀ ಚಮಚದಷ್ಟು ಸಕ್ಕರೆಯನ್ನು ಹಾಕಿ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಬೇಕು.

RELATED ARTICLES  ಆರಾಮಾಗಿ ತಯಾರಿಸಿ ಸ್ಯಾಂಡ್ ವಿಚ್!

ಬೆಂದ ನಂತರ ತೆಂಗಿನ ಕಾಯಿ ತುರಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಊಟದ ಜೊತೆ ತಿಂದರೆ ಬಲು ರುಚಿಯಾಗಿರುತ್ತದೆ.