ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ, ಲಂಚ್ ಬಾಕ್ಸ್ ಯಾವೂದಕ್ಕಾದರೂ ಸೈ! ರುಚಿಯಾಗಿರುತ್ತದೆ! ರೆಸಿಪಿ ನೋಡೋಣವೇ?

ಮಾಡುವ ವಿಧಾನ:-

1 ಲೋಟ ಕಾಯಿ ಹಾಲು ತೆಗೆದಿಡಿ.

1 ಲೋಟ ಅಕ್ಕಿ ತೊಳೆದು ಕಾಯಿ ಹಾಲು ಮತ್ತು 1 ಲೋಟ ನೀರು, 1 ಇಂಚು ಚಕ್ಕೆ, 2 ಏಲಕ್ಕಿ, 4 ಲವಂಗ, 1 ಚಮಚ ತುಪ್ಪ ಹಾಕಿ ಅನ್ನ ಮಾಡಿಡಿ.

6 ಟೊಮೆಟೊ ತೊಳೆದು ಸಣ್ಣಗೆ ಹೆಚ್ಚಿಡಿ.

2 ಈರುಳ್ಳಿ ಹೆಚ್ಚಿಡಿ.

2 ಹಸಿ ಮೆಣಸಿನಕಾಯಿ ಉದ್ದಕ್ಕೆ ಸೀಳಿಡಿ.

RELATED ARTICLES  ಬೆಳಗಾವಿ ಕುಂದಾ ನೀವೂ ತಯಾರಿಸಬಹುದು! ಹೇಗೆ ಗೊತ್ತಾ?

ಬಾಣಲೆಯಲ್ಲಿ 5 ಚಮಚ ಎಣ್ಣೆ ಹಾಕಿ, ಜೀರಿಗೆ, ಕರಿಬೇವು, ಈರುಳ್ಳಿ, ಚಿಟಿಕೆ ಅರಿಶಿಣ, 1 ಚಮಚ Ginger Garlic Paste, ಟೊಮೇಟೋ ಹಾಕಿ ಸ್ವಲ್ಪ ಬಾಡಿಸಿ.

ನಂತರ 1/2 ಚಮಚ ಖಾರಾದ ಪುಡಿ, 1/4 ಚಮಚ ಗರಂ ಮಸಾಲ, ಉಪ್ಪು , ಚಿಟಿಕೆ ಸಕ್ಕರೆ ಹಾಕಿ ಕಲೆಸಿ, ಬೇಯಿಸಿದ ಅನ್ನ, ಸ್ವಲ್ಪ ಕೊತ್ತಂಬರಿ ಸೊಪ್ಪು, (ಸ್ವಲ್ಪ ನಿಂಬೆ ರಸ ಬೇಕಾದರೆ ) ಸೇರಿಸಿದರೆ ರುಚಿಯಾದ ಮಸಾಲ ಟೊಮೆಟೊ ಬಾತ್ ಸಿದ್ಧ!

RELATED ARTICLES  ಸುಲಭವಾದ ಪನ್ನಿರ್ ಪಲಾವ್.

ಹಸಿ ಮೆಣಸಿನಕಾಯಿ ಮತ್ತು ಖಾರಾ ಪುಡಿ ಎರಡೂ ಹಾಕುವುದರಿಂದ ನಿಮ್ಮ ರುಚಿಗೆ ತಕ್ಕಷ್ಟು ಖಾರಾ ಹಾಕಿಕೊಳ್ಳಿ.

ಕಾಯಿ ಹಾಲು ಹಾಕುವುದರಿಂದ ಹೆಚ್ಚಿನ ರುಚಿ ಇರುತ್ತದೆ ಈ ಟೊಮೆಟೊ ಬಾತ್. ಹಾಕದೆ ಬೇಕಾದರೂ ಮಾಡಬಹುದು.

ನಾನು ಸಾಧಾರಣ ಅಕ್ಕಿ ಹಾಕಿದ್ದೇನೆ. ನೀವು ಬೇಕಾದರೆ ಬಾಸುಮತಿ ಅಕ್ಕಿ ಹಾಕಬಹುದು. ನೀರು ಸ್ವಲ್ಪ ಕಡಿಮೆಹಾಕಬೇಕು ಅಷ್ಟೇ.