ಬೆಂಗಳೂರು: ಜಾಗತಿಕ ಆರ್ಥಿಕ ಅನಿಶ್ಚಿತತೆ, ಆರ್ಥಿಕ ಹಿಂಜರಿಕೆ ಭೀತಿ ಮಧ್ಯೆ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯ ಸಾಧನವಾಗಿ ಪರಿಗಣಿಸುತ್ತಿದ್ದಾರೆ. ದೇಶದ ಷೇರುಪೇಟೆಗಳಲ್ಲಿಯೂ ಏರಿಳಿತದ ಟ್ರೆಂಡ್ ಮುಂದುವರಿದಿರುವುದರಿಂದ ಜನರು ಚಿನ್ನದ ಮೇಲಿನ ಹೂಡಿಕೆಯ ಬಗ್ಗೆ ಗಮನಹರಿಸುತ್ತಿರುವುದು ಸಹಜ. ಕಳೆದ ಕೆಲವು ದಿನಗಳಿಂದ ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಕೂಡ ತುಸು ಏರಿಳಿತ ಕಾಣುತ್ತಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಉಭಯ ಲೋಹಗಳ ದರ ಹೆಚ್ಚಾಗಿದ್ದರೆ, ಇಂದು ಚಿನ್ನದ ದರ ಹೆಚ್ಚಾಗಿದೆ. ಬೆಳ್ಳಿ ದರ ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ 400 ರೂ. ಹೆಚ್ಚಳವಾಗಿ 48,200 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 430 ರೂ. ಹೆಚ್ಚಳವಾಗಿ 52,580 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಇಳಿಕೆಯಾಗಿ 61,700 ರೂಪಾಯಿ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,920 ರೂ. ಮುಂಬೈ- 48,200 ರೂ, ದೆಹಲಿ- 48,350 ರೂ, ಕೊಲ್ಕತ್ತಾ- 48,200 ರೂ, ಬೆಂಗಳೂರು- 48,250 ರೂ, ಹೈದರಾಬಾದ್- 48,200 ರೂ, ಕೇರಳ- 48,200 ರೂ, ಪುಣೆ- 48,230 ರೂ, ಮಂಗಳೂರು- 48,250 ರೂ, ಮೈಸೂರು- 48,250 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,370 ರೂ, ಮುಂಬೈ- 52,580 ರೂ, ದೆಹಲಿ- 52,750 ರೂ, ಕೊಲ್ಕತ್ತಾ- 52,580 ರೂ, ಬೆಂಗಳೂರು- 52,630 ರೂ, ಹೈದರಾಬಾದ್- 52,580 ರೂ, ಕೇರಳ- 52,580 ರೂ, ಪುಣೆ- 52,610 ರೂ, ಮಂಗಳೂರು- 52,630 ರೂ, ಮೈಸೂರು- 52,630 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,500 ರೂ, ಮೈಸೂರು- 67,500 ರೂ., ಮಂಗಳೂರು- 67,500 ರೂ., ಮುಂಬೈ- 61,700 ರೂ, ಚೆನ್ನೈ- 67,500 ರೂ, ದೆಹಲಿ- 61,700 ರೂ, ಹೈದರಾಬಾದ್- 67,500 ರೂ, ಕೊಲ್ಕತ್ತಾ- 61,500 ರೂ. ಆಗಿದೆ.