ನವದೆಹಲಿ: ಬಹುಪಾಲು ಪೋಷಕರು ತಮ್ಮ ಮಗುವಿನ ಆಸಕ್ತಿಯನ್ನು ಅವರ ಸಂತೋಷದ ಪ್ರತಿಬಿಂಬವೆಂದು ಭಾವಿಸುತ್ತಾರೆ ಎಂಬುದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಪಿನ್ನಿ (Play-Interest-Wise) ನಡೆಸಿದ ಸಮೀಕ್ಷೆಯ ಪ್ರಕಾರ, ಪೋಷಕರು ಚಿಕ್ಕ ವಯಸ್ಸಿನಲ್ಲೇ ಮಗುವಿನ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವುದರಿಂದ ಮುಂದೆ ದೊಡ್ಡವರಾದ ಮೇಲೂ ಸಂತೋಷವಾಗಿರುತ್ತಾರೆ ಎಂಬುದನ್ನು ಮಗುವಿನ ಅಭಿವೃದ್ಧಿ ಮತ್ತು ಸ್ಮಾರ್ಟ್ ಪಾಲನೆಯ ಒಂದು ಡೇಟಾ ಚಾಲಿತ ಅಪ್ಲಿಕೇಶನ್ ಬಹಿರಂಗಪಡಿಸಿದೆ.
ಸಮೀಕ್ಷೆಯ ವೇಳೆ ದೇಶಾದ್ಯಂತ ಒಟ್ಟು 800 ಪೋಷಕರಿಂದ ಮಾಹಿತಿ ಸಂಗ್ರಹಿಸಲಾಗಿದ್ದು, ಶೇ.73ರಷ್ಟು ಪೋಷಕರು ತಮ್ಮ ಮಗುವಿನ ಆಸಕ್ತಿಯೇ ಅವರ ಸಂತೋಷದ ಪ್ರತಿಬಿಂಬ ಎಂದಿದ್ದಾರೆ. ಇನ್ನು ಶೇ.16ರಷ್ಟು ಪೋಷಕರು ಹವ್ಯಾಸಗಳ ಬಗ್ಗೆ ಆಸಕ್ತಿ ತೋರಿದರೆ, ಶೇ. 11ರಷ್ಟು ಮಂದಿ ಯೋಗ್ಯತೆಗೆ ಸಂಬಂಧಿಸಿದ್ದು ಎಂದಿದ್ದಾರೆ.