ಹ್ಯಾಕಿಂಗ್ ಮತ್ತು ಫಿಶಿಂಗ್ ಸಮಸ್ಯೆಗಳನ್ನು ಎದುರಿಸಲು ಗೂಗಲ್ ಸೆಕ್ಯುರಿಟಿಗಾಗಿ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಆದರೆ ಇನ್ನುಮುಂದೆ ಗೂಗಲ್ ಕ್ರೋಮ್ಗೆ ಲಾಗಿನ್ ಆಗಬೇಕಾದರೆ ಯಾವುದೇ ಪಾಸ್ವರ್ಡ್ಗಳನ್ನು ಹಾಕಬೇಕಾಗಿಲ್ಲ ಡೈರೆಕ್ಟ್ ಆಗಿಯೇ ಓಪನ್ ಮಾಡಬಹುದು. ಆದರೆ ಇದರ ಬದಲಿಗರ ಪಾಸ್‌ಕೀ ಎಂಬ ಫಿಚರ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪಾಸ್‌ಕೀ ಯಾವುದೇ ಕಾರಣಕ್ಕು ಮರುಬಳಕೆ ಮಾಡಲಾಗುವುದಿಲ್ಲ.
ಪ್ರಸ್ತುತವಾಗಿ ಯಾವುದೇ ಒಂದು ಸೇವೆಗಳನ್ನು ಪಡೆಯಬೇಕಾದರು ಮೊಬೈಲ್ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳ ರೂಪದಲ್ಲಿ ಪಡೆಯಬಹುದು. ಆದರೆ ಈ ಎಲ್ಲಾ ಅಪ್ಲಿಕೇಶನ್ಗಳನ್ನು ಅಥವಾ ವೆಬ್ಸೈಟ್ ಓಪನ್ ಮಾಡಬೇಕಾದರೆ ಪಾಸ್ವರ್ಡ್ಗಳನ್ನು ಹಾಕಬೇಕಿತ್ತು. ಇದು ಬಳಕೆದಾರರ ಸೇಫ್ಟಿಗಾಗಿ ಹಾಕಲಾಗುತ್ತಿತ್ತು. ಆದರೆ ಅನೇಕ ಸಂದರ್ಭಗಳಲ್ಲಿ ಈ ವಾಟ್ಸಪ್ಗಳು ಹ್ಯಾಕಿಂಗ್ಗೆ ಗುರಿಯಾಗುತ್ತವೆ. ಇದಕ್ಕಾಗಿ ಪಾಸ್ವರ್ಡ್ಗಳನ್ನು ಹಾಕುವಾಗ ಸ್ಟ್ರಾಂಗ್ ಪಾಸ್ವರ್ಡ್ಗಳನ್ನು ಹಾಕಬೇಕು ಇಲ್ಲದಿದ್ದರೆ ಹ್ಯಾಕ್ (Hack) ಅಗುವಂತಹ ಚಾನ್ಸಸ್ ಜಾಸ್ತಿ ಇರುತ್ತದೆ. ಈ ಎಲ್ಲಾ ಸಮಸ್ಯೆಯನ್ನು ಗಮನಿಸಿಕೊಂಡು ಗೂಗಲ್ ಕಂಪನಿ ಕ್ರೋಮ್ (Google Chrome) ಬಳಕೆದಾರರಿಗೆ ಹೊಸ ಅಪ್ಡೇಟ್ ಅನ್ನು ಹೊರತಂದಿದೆ. ಇದು ಬಿಡುಗಡೆ ಮಾಡಿದ ಹೊಸ ಅಪ್ಡೇಟ್ ಪಾಸ್‌ಕೀ ಎಂದಾಗಿದೆ.
ಗೂಗಲ್ ಕ್ರೋಮ್ ಹೊಸ ಅಪ್ಡೇಟ್ ಮೂಲಕ ಬಳಕೆದಾರರು ಪಾಸ್ವರ್ಡ್ಗಳನ್ನು ಟೈಪ್ ಮಾಡದೆಯೇ ಲಾಗಿನ್ ಮಾಡಬಹುದಾಗಿದೆ. ಅಂದರೆ ಈ ಹೊಸ ಫೀಚರ್ಸ್‌ನಲ್ಲಿ ಬಳಕೆದಾರರು ಪಾಸ್‌ಕೀಗಳೊಂದಿಗೆ ಲಾಗ್ ಇನ್ ಆಗಬಹುದಾಗಿದೆ. ಈ ಸರ್ವರ್ ಹ್ಯಾಕ್ ಆಗುವುದಿಲ್ಲ, ಫಿಶಿಂಗ್ ದಾಳಿಯಿಂದ ಬಳಕೆದಾರರನ್ನು ರಕ್ಷಿಸುತ್ತದೆ. ಮುಖ್ಯವಾಗಿ ಹೇಳುವುದಾದರೆ ಹಣಕಾಸು ವ್ಯವಹಾರ, ಇತರ ಉದ್ಯಮಗಳ ಬಗ್ಗೆ ಹೆಚ್ಚು ಗಮನದಲ್ಲಿಟ್ಟುಕೊಂಡು ಈ ಅಪ್ಡೇಟ್ ಅನ್ನುಮಾಡಲಾಗಿದೆ. ಈ ಫಿಚರ್ಸ್ ಬೇರೆ ಬೇರೆ ಆಪರೇಟಿಂಗ್ ಸಿಸ್ಟಮ್‌ಗಳು ಮತ್ತು ಬ್ರೌಸರ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಎರಡರಲ್ಲೂ ಇದನ್ನು ಬಳಸಬಹುದಾಗಿದೆ.
ಈ ಪಾಸ್‌ಕೀ ಗಳು ಸಾಮಾನ್ಯವಾಗಿ ಇತ್ತೀಚಿನ ವರ್ಷನ್ನಲ್ಲಿರುವ ವಿಂಡೋಸ್ 11, ಮ್ಯಾಕ್ ಓಎಸ್ ಹಾಗೂ ಇತರೆ ಆಂಡ್ರಾಯ್ಡ್ ಡಿವೈಸ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಮುಖ್ಯವಾಗಿ ಗೂಗಲ್ ತನ್ನ ಸ್ವಂತ ಪಾಸ್ವರ್ಡ್ ನಿರ್ವಾಹಕ ಅಥವಾ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳ ಮೂಲಕ ಬಳಕೆ ಮಾಡುತ್ತಿರುವಾಗ ಅ ಸಾಧನದ ಇತರ ಡಿವೈಸ್ಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೆಕ್ಯುರಿಟಿಯನ್ನು ನೀಡುತ್ತದೆ.
ಸಾಮಾನ್ಯವಾಗಿ ಯಾವುದೇ ಒಂದು ಅಪ್ಲಿಕೇಶನ್ ಅತವಾ ವೆಬ್ಸೈಟ್ಗಳನ್ನು ಲಾಗಿನ್ ಮಾಡಬೇಕಾದರೆ ಫಿಂಗರ್ಪ್ರಿಂಟ್, ಪಿನ್ ಅಥವಾ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗುತ್ತಾರೆ. ಆದರೆ ಈ ಎಲ್ಲಾ ಸೆಕ್ಯುರಿಟಿಗಳಿಗಿಂತ ಪಾಸ್‌ಕೀ ಬಹಳಷ್ಟು ಉತ್ತಮ ಎಂದು ಹೇಳುತ್ತಾರೆ. ಏಕೆಂದರೆ ಹೆಚ್ಚು ಜನರು ಹಲವಾರು ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ಹೊಂದಿರುತ್ತಾರೆ. ಆದರೆ ಅದಕ್ಕೆಲ್ಲದಕ್ಕೂ ಬೇರೆ ಬೇರೆ ಪಾಸ್ವರ್ಡ್ಗಳನ್ನು ಹಾಕಿರುತ್ತಾರೆ ಮತ್ತು ಸ್ವಲ್ಪ ಸಮಯದ ನಂತರ ಅದನ್ನು ಮರೆತು ಬಿಡುತ್ತಾರೆ, ಆದರೆ ಈ ಪಾಸ್ಕೀಗಳಲ್ಲಿ ಆ ಸಮಸ್ಯೆಯಾಗುವುದಿಲ್ಲ.
ಫಿಂಗರ್ಪ್ರಿಂಟ್ನಂತೆಯೂ ನಿಮ್ಮ ಅಕೌಂಟ್ಗಳಿಗೆ ಪಾಸ್ಕೀಗಳನ್ನು ಹಾಕಬಹುದು. ಇದರಿಂದ ಯಾರಿಗೂ ನಿಮ್ಮ ಅಕೌಂಟ್ ಅನ್ನು ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಅಥವಾ ಒನ್ ಟೈಮ್ ಪಾಸ್ವರ್ಡ್ ಹಾಕುವ ಮೂಲಕವೂ ನಿಮ್ಮ ಅಕೌಂಟ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು.
ಪಾಸ್ಕೀಗಳು ಸೇಮ್ ಹಿಂದಿನ ಪಾಸ್ವರ್ಡ್ಗಳಂತೆಯೇ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ತಮ್ಮ ಗೂಗಲ್ ಅಕೌಂಟ್ಗಳಿಗೆ ಸೈನ್ ಮಾಡುವ ಸಂದರ್ಭದಲ್ಲಿ ಡಿವೈಸ್ ಅಥವಾ ವೆಬ್ಸೈಟ್ ಪಾಸ್ಕೀಯನ್ನು ಕೇಳುತ್ತದೆ. ಈ ಸಂದರ್ಭದಲ್ಲಿ ಫಿಂಗರ್ಪ್ರಿಂಟ್ ಅಥವಾ ಯಾವ ಪಾಸ್ಕೀಗಳನ್ನು ಹಾಕಿರುತ್ತೀರೋ ಅದನ್ನು ಹಾಕಬೇಕು.