ಬಹುನಿರೀಕ್ಷಿತ ಬೈಕ್ ಮಾದರಿಯ ಇಲೆಕ್ಟ್ರಿಕ್ ವಾಹನ ಭಟ್ಕಳದ ಬೆಳಕೆಯ ಗೊರಟೆ ಕ್ರಾಸ್ ನಲ್ಲಿರುವ ಶ್ರೀನಿವಾಸ ಇ ವೇಹಿಕಲ್ಸ್ ಶೋರೂಂ ನಲ್ಲಿ ಅನಾವರಣಗೊಂಡಿದೆ.
ಹೈದರಾಬಾದ್ ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಪ್ಲಾಂಟ್ ಹೊಂದಿರುವ ಪ್ಯೂರ್ ಇವಿ ಕಂಪನಿಯಿಂದ ಈ ಬೈಕ್ ಮಾದರಿಯ ಇಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.


ಗ್ರಾಹಕರಿಗೆ ವಿಶೇಷ ಕಾಳಜಿಯನ್ನು ನೀಡಿ ಆಫ್ಟರ್ ಸೇಲ್ಸ್ ವಿಚಾರದಲ್ಲಿ ಅತ್ಯಂತ ಹೆಚ್ಚು ವಿಶ್ವಾಸಾರ್ಹವಾಗಿ ಒಂದೂವರೆ ವರ್ಷಗಳಿಂದ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಇ ವೇಹಿಕಲ್ಸ್ ನಲ್ಲಿ ಪ್ಯೂರ್ ಇವಿ ಇಕೊಡ್ರಿಫ್ಟ್ (PURE EV ecoDryft) ಬೈಕ್ ಮಾದರಿಯ ವಾಹನ ಟೆಸ್ಟ್ ರೈಡ್ ಗೆ ಲಭ್ಯವಿದ್ದು ಆಸಕ್ತರು ಶೋರೂಂಗೆ ಭೇಟಿ ನೀಡಿ ವಾಹನದ ಬಗ್ಗೆ ಮಾಹಿತಿ ಪಡೆದುಕೊಂಡು ಟೆಸ್ಟ್ ರೈಡ್ ಮಾಡಬಹುದಾಗಿದೆ.

RELATED ARTICLES  ಗೂಗಲ್‌ ಕ್ರೋಮ್‌ ಬಳಸುವ ಬಳಕೆದಾರರಿಗೆ ಇದು ನಿಜಕ್ಕೂ ಶಾಕಿಂಗ್‌ ನ್ಯೂಸ್‌.


ಈ ವಾಹನವು ಒಂದು ಚಾರ್ಜನಲ್ಲಿ 135 ಕಿಲೋಮೀಟರಗಳನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದ್ದು, 75 kmph ಟಾಪ್ ಸ್ಪೀಡ್ ಹೊಂದಿರುತ್ತದೆ, ಪ್ರತಿ ಕೀ.ಮೀ. ಕ್ರಮಿಸಲು ಕೇವಲ 20 ಪೈಸೆ ಖರ್ಚು ತಗಲುತ್ತದೆ.
ಶ್ರೀನಿವಾಸ ಇ ವೇಹಿಕಲ್ಸ್ ಭಟ್ಕಳ, ಹೊನ್ನಾವರ ಹಾಗೂ ಕುಮಟಾ ಗಳಲ್ಲಿ ಸೇಲ್ಸ್ ಹಾಗೂ ಸರ್ವೀಸ್ ಸೆಂಟರ್ ಗಳನ್ನು ಹೊಂದಿದ್ದು, ಎಲ್ಲಾ ಕಡೆಗಳಲ್ಲು ಈ ಬೈಕನ್ನು ಟೆಸ್ಟ್ ರೈಡ್ ಮಾಡಲು ಅವಕಾಶ ಇರುತ್ತದೆ.

RELATED ARTICLES  ಕೃತಕ ಬುದ್ದಿಮತೆ (ಎಐ) ತಂತ್ರಜ್ಞಾನ ಅಳವಡಿಕೆ: ಶೇ. 90 ರಷ್ಟು ಸಿಬ್ಬಂದಿ ವಜಾ


ಈ ಬೈಕ್ ಜೊತೆಗೆ ಈಗಾಗಲೇ ಲಭ್ಯವಿರುವ ಇಪ್ಲುಟೋ 7G ಮತ್ತು ಈ ಟ್ರಾನ್ಸ್ ನಿಯೋ ಎನ್ನುವ ಎರಡು ಸ್ಕೂಟರ್ ವಾಹನಗಳು ಕೂಡ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಗೆ ಕರೆಮಾಡಿ.
7348900970, 9738943425.