ಕುಮಟಾ : ತಾಲೂಕಿನ ಹಳೇ ಮೀನುಮಾರುಕಟ್ಟೆ ರಸ್ತೆಯ ಜಯನಗರದಲ್ಲಿರುವ ವಿನಾಯಕ ರೆಕ್ಸಿನ್ ಹೌಸ್ ನಲ್ಲಿ ಕನ್ನಡದ ನಂ ೧ ದಿನಪತ್ರಿಕೆ ಎನಿಸಿರುವ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಭಾಗಿತ್ವದಲ್ಲಿ “ವಿಜಯೋತ್ಸವ – ಶಾಪಿಂಗ್ ಉತ್ಸವ” ನಡೆದಿದ್ದು ಇಂದು ಅದರ ಫಲಿತಾಂಶ ಹೊರಬಿದ್ದಿದೆ. ಸರಿಸುಮಾರು ಹತ್ತು ಸಾವಿರ ರೂಪಾಯಿಗಳ ಬೆಡ್ ಖರೀದಿಸಿದ್ದ ಗೌರೀಶ ಎಂ. ಭಂಡಾರಿ ಮಣಕಿ ಕುಮಟಾ ಇವರಿಗೆ ಅದೃಷ್ಟ ಒಲಿದು ಬಂದಿದ್ದು, ಪ್ರಥಮ ಬಹುಮಾನ ಇವರ ಪಾಲಿಗೆ ಲಭ್ಯವಾಗಿದೆ.
ಪ್ರಥಮ ಬಹುಮಾನವಾಗಿ ನೀಡಲ್ಪಡುವ ಕಾರು ಪಡೆಯಲು ಇವರು ಅರ್ಹರಾಗಿದ್ದು ಈ ಕುರಿತಾಗಿ ವಿನಾಯಕ ರೆಕ್ಸೀನ್ ಹೌಸ್ ನ ಮಾಲಿಕ ವಿನಾಯಕ ಹೆಗಡೆಕಟ್ಟೆ ಮಾಹಿತಿ ನೀಡಿದ್ದಾರೆ. “ಅದೃಷ್ಟ ನಿಮ್ಮದು ಕೊಡುಗೆ ನಮ್ಮದು” ಎಂಬ ಶೀರ್ಷಿಕೆಯಲ್ಲಿ ಗ್ರಾಹಕರಿಗೆ ವಿವಿಧ ಕಂಪನಿಗಳ ವಸ್ತುಗಳ ಮೇಲೆ ರಿಯಾಯತಿ ಮಾರಾಟ ಹಾಗೂ ಬಂಪರ್ ಬಹುಮಾನವಾಗಿ 2 ಕಾರ್,ಬೈಕ್, ರೆಫ್ರಿಜರೇಟರ್, ಟಿ.ವಿ, ಬೈಸಿಕಲ್, ಪ್ರಷರ್ ಕುಕ್ಕರ್ ,ಮಿಕ್ಸರ್, ಗ್ರೈಂಡರ್, ಗ್ಯಾಸ್ ಸ್ಟೌ, ಸೇಫ್ ಲಾಕರ್ ಹಾಗೂ ಇನ್ನೂ ನೂರಾರು ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶ ಕಲ್ಪಿಸಲಾಗಿತ್ತು. ಬಹುಮಾನ ವಿಜೇತರಿಗೆ ಅಂಗಡಿ ಮಾಲಿಕರು ಹಾಗೂ ಸಂಘಟಕರು ಅಭಿನಂದನೆ ಸಲ್ಲಿಸಿದ್ದಾರೆ.