ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಹೋದಾಗ ತಿನ್ನುವ ಪಲಾವ್ ರೆಸಿಪಿ ಇಲ್ಲಿದೆ.

ಮಾಡುವ ವಿಧಾನ:-

ನಿಮಗೆ ಬೇಕಾದ ತರಕಾರಿಗಳನ್ನು ತೊಳೆದು ಚಿಕ್ಕದಾಗಿ ಹೆಚ್ಚಿಡಿ.

1 ಲೋಟ ಬಾಸುಮತಿ ಅಕ್ಕಿ ತೊಳೆದು ನೀರು ಸೋರಿ ಹಾಕಿಡಿ.

1 ಬೆಳ್ಳುಳ್ಳಿ, 1 ಇಂಚು ಶುಂಠಿ, 4 ಹಸಿ ಮೆಣಸಿನಕಾಯಿ ನೀರು ಹಾಕದೆ ಪೇಸ್ಟ್ ಮಾಡಿಡಿ.

ಸ್ವಲ್ಪ ಪುದೀನಾ, ಕೊತ್ತಂಬರಿ ಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ.

RELATED ARTICLES  ಬ್ರೆಡ್ ದೋಸಾ ಮಾಡೋದು ನಿಮಗೆ ಗೊತ್ತಾ?

ಕುಕ್ಕರಿನಲ್ಲಿ 4 ಚಮಚ ತುಪ್ಪ/ಎಣ್ಣೆ ಹಾಕಿ, ಕಾದ ನಂತರ 1 ಇಂಚು ಚಕ್ಕೆ, 4 ಲವಂಗ, 2 ಏಲಕ್ಕಿ, 1 ಪಲಾವ್ ಎಲೆ, 1 ಮರಾಠಿ ಮೊಗ್ಗು, ಕಲ್ಲು ಹೂವು ಸ್ವಲ್ಪ, 1/2 ಚಮಚ ಜೀರಿಗೆ, 1/4 ಚಮಚ ಕರಿ ಮೆಣಸು, 1/4 ಚಮಚ ಸೋಂಪು ಹಾಕಿ ಹುರಿದು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸ್ವಲ್ಪ ಬಾಡಿಸಿ, ಹೆಚ್ಚಿದ ತರಕಾರಿಗಳು, ಬೆಳ್ಳುಳ್ಳಿ ಮಿಶ್ರಣ, ಉಪ್ಪು, ತೊಳೆದ ಬಾಸುಮತಿ ಅಕ್ಕಿ, ಹೆಚ್ಚಿದ ಕೊತ್ತಂಬರಿ, ಪುದೀನಾ ಹಾಕಿ ಹುರಿದು, 1 3/4 ಅಥವಾ 2 ಲೋಟ ನೀರು ಹಾಕಿ ಚೆನ್ನಾಗಿ ಕಲೆಸಿ.

RELATED ARTICLES  ರುಚಿಯಾದ ಗರಿಗರಿಯಾದ ಅಕ್ಕಿ ಸಂಡಿಗೆ…!!

ಕುಕ್ಕರಿನ ಮುಚ್ಚಳ ಮುಚ್ಚಿ 1 ವಿಷಲ್ ಕೂಗಿಸಿಡಿ.

ಅಥವಾ ಕುಕ್ಕರಿನ ಮುಚ್ಚಳ ಹಾಕಿ ವೇಟ್ ಹಾಕದೆ ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿದರೆ, ರೆಸ್ಟೋರೆಂಟ್ ಶೈಲಿಯ ಪಲಾವ್ ಸಿದ್ಧ!

ಮೊಸರು ಬಜ್ಜಿಯೊಂದಿಗೆ ತುಂಬಾ ರುಚಿಯಾಗಿರುತ್ತದೆ.