ಬೆಂಡೆ ಕಾಯಿ ಮಜ್ಜಿಗೆ ಹುಳಿ:

1/4 ಕೆಜಿ- ಬೆಂಡೆಕಾಯಿ ( 1 ಇಂಚು ಉದ್ದಕ್ಕೆ ಹೆಚ್ಚಿ ಕೊಳ್ಳ ಬೇಕು).
1 ಹಿಡಿ ತೊಗರಿ ಬೇಳೆ,
1 ಹಿಡಿ ದನಿಯಾ,
1 ಹಿಡಿ ಅಕ್ಕಿ ,
1 ಚಮಚ ಜೀರಿಗೆ,
ಈನಾಲ್ಕನ್ನೂ ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.
1/2 ಬಟ್ಟಲು ತೆಂಗಿನ ಕಾಯಿ ತುರಿ,
6 ಹಸಿ ಮೆಣಸಿನ ಕಾಯಿ,
1/2 ಚಮಚ ಸಾಸಿವೆ,
ಚಿಟಿಕೆ- ಇಂಗು.
ಅರಿಷಿನ-ಚಿಟಿಕೆ,
ಇವೆಲ್ಲ ವನ್ನೂ ಸ್ವಲ್ಪ ಮೊಸರು ಹಾಕಿ ತಿರುವಿಕೊಳ್ಳ ಬೇಕು.
ನಂತರ ಮತ್ತಷ್ಟು ಮೊಸರು ಸೇರಿಸಿ ಚೆನ್ನಾಗಿ ಕಡೆದುಕೊಳ್ಳಬೇಕು.

ಒಂದು ಪಾತ್ರೆಯಲ್ಲಿ ಇವೆಲ್ಲ ವನ್ನೂ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು.

ಗಟ್ಟಿಯಾದರೆ ಸ್ವಲ್ಪ ನೀರು ಸೇರಿಸಿ.
ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಚೆನ್ನಾಗಿ ಕಾದ ನಂತರ ಬೆಂಡೆಕಾಯಿ ಯನ್ನು ಚೆನ್ನಾಗಿ ಹುರಿಯಿರಿ.
ಹುರಿದ ನಂತರ ಅವೆಲ್ಲ ವನ್ನೂ ಕುದಿಯುತ್ತಿರುವ ಮಜ್ಜಿಗೆ ಹುಳಿ ಯೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ.
ನಂತರ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಕಾಯಿಸಿ, ಅದರಲ್ಲಿ ಸಾಸಿವೆ, ಮೆಂತೆ , ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಒಗ್ಗರಣೆ ಹಾಕಿ.
ಮಜ್ಜಿಗೆ ಹುಳಿ ರೆಡಿ.

RELATED ARTICLES  ಆರೋಗ್ಯಕರವಾದ ಕ್ಯಾರೆಟ್ ಚಟ್ನಿ


ಗೋರಿಕಾಯಿ ಬೇಳೆ ಉಸಲಿ:

ಗೋರಿಕಾಯಿ-1/4 ಕೆಜಿ.
ತೊಗರಿ ಬೇಳೆ- 1 ಹಿಡಿ,
ಕಡ್ಲೆಬೇಳೆ-1 ಹಿಡಿ,
ಬ್ಯಾಡಗಿ ಮೆಣಸಿನ ಕಾಯಿ-4,
ಇಂಗು- ಚಿಟಿಕೆ,
ಉಪ್ಪು,
ಕೊಬ್ಬರಿ ಎಣ್ಣೆ- 2 ಚಮಚ.

ವಿದಾನ:
ಗೋರಿಕಾಯಿ ಯನ್ನು ಸಣ್ಣಗೆ ಹೆಚ್ಚಿ ಕೊಳ್ಳ ಬೇಕು.
ತೊಗರಿ ಬೇಳೆ+ ಕಡ್ಲೆಬೇಳೆ ಯನ್ನು 1 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಕೊಳ್ಳ ಬೇಕು.

RELATED ARTICLES  ಗ್ರೀನ್ ಚಟ್ನಿ

ನಂತರ ಬೇಳೆ ಗಳು ಮತ್ತು ಬ್ಯಾಡಗಿ ಮೆಣಸಿನ ಕಾಯಿ, ಇಂಗು ಎಲ್ಲ ವನ್ನೂ ನೀರು ಹಾಕದೆ ತಿರುವಿಕೊಳ್ಳ ಬೇಕು.
ಕುಕ್ಕರ್ ನಲ್ಲಿ ಹೆಚ್ಚಿದ ಗೋರಿಕಾಯಿ+ ರುಬ್ಬಿಕೊಂಡ ಬೇಳೆ ಯನ್ನು ನೀರು ಹಾಕದೆ ಬೇಯಿಸಿ ಕೊಳ್ಳ ಬೇಕು. ಬೆಂದ ಬೇಳೆ ಯನ್ನು ಚೆನ್ನಾಗಿ ಉದುರಿಸಿಕೊಳ್ಳಬೇಕು.
ಒಂದು ಬಾಣಲೆಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯನ್ನಕಾಯಿಸಿ, ಅದಕ್ಕೆ ಸಾಸಿವೆ ಒಗ್ಗರಣೆ ಹಾಕಿ. ಉದುರಿಸಿಕೊಂ ಡ ಬೇಳೆ ಯನ್ನು ಹಾಕಿ ಸ್ವಲ್ಪ ಹುರಿಯಿರಿ.

ಈಗ ಗೋರಿಕಾಯಿ ಯನ್ನು ಹಾಕಿ, ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ . 5 ನಿಮಿಷಗಳ ನಂತರ ಕೆಳಗೆ ಇಳಿಸಿ.
ಉಸಲಿ ರೆಡಿ.