ಅಕ್ಷರರೂಪ ; ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ

ಸ್ವಪ್ರಕಾಶಕವಾಗಿದ್ದು ಯಾವುದರಲ್ಲಿ ಬೇರೆ ಎಂದು ಯಾವುದೂ ಎಂದೂ ಉತ್ಪನ್ನವಾಗುವದಿಲ್ಲವೋ, ಯಾವುದರಲ್ಲಿ ಬೇರೆ ಎಂದು ಯಾವುದೂ ಇಲ್ಲವೋ ಆ ರೀತಿಯ ನಿತ್ಯ ನಿರ್ವಿಕಲ್ಪ ಜ್ಞಾನಮಾತ್ರ ಸ್ವರೂಪವೇ ಎಂದು ನಿಶ್ಚಯಿಸಿ, ನಮ್ಮ ‘ನಾನು’ ಎಂಬ ಅನಿಸುವಿಕೆಯಿಂದಾರಂಭಿಸಿ ಉಳಿದೆಲ್ಲ ಕಲ್ಪನೆಗಳಲ್ಲೂ ಅದನ್ನೇ ಅಹರ್ನಿಶಿ ಅಖಂಡ ಇಡಲು ಪ್ರಯತ್ನಮಾಡಿ; ಇದಕ್ಕೇ ನಿಧಿಧ್ಯಾಸವೆನ್ನುತ್ತಾರೆ. ನಿಧಿಧ್ಯಾಸದಲ್ಲಿ ಸಾಕ್ಷಾತ್ಕಾರ ಹಿತಮಿತವಾಗಿದೆ.

(ಇಸವಿ ಸನ ೧೯೪೭ರ ಸುಮಾರಿಗೆ ಶ್ರೀದತ್ತಾ ಬುವಾ ರಾಮದಾಸಿ ಸಜ್ಜನಗಡ ಅವರಿಗೆ ಬರೆದ ಪತ್ರ)
||ಓಂ ಶ್ರೀರಾಮ ಸಮರ್ಥ||
ರಾಣಾಪುರ
ಚಿ. ದತ್ತಾನಿಗೆ ಆಶೀರ್ವಾದ,

RELATED ARTICLES  ಸಂಜೆಯಾಗುತ್ತಿದ್ದಂತೆ ರಸ್ತೆಗೆ ಬರುವ ಕಾಡು ಹಂದಿಗಳು : ಶಾಲಾ ಮಕ್ಕಳು ಓಡಾಡುವ ಜಾಗದಲ್ಲಿ ವರಾಹಗಳ ಹಾವಳಿ

ಚಿ. ಗಂಗೆಯ ಪತ್ರ ಬಂದು ತಲುಪಿತು. ಎಲ್ಲೆಲ್ಲಿ ಅನ್ನ ನೀರಿನ ಋಣಾನುಬಂಧವಿದೆಯೋ ಅದೇ ಆ ಆ ವೇಳೆಗೆ ಅಲ್ಲಲ್ಲಿ ಹೋಗಲು ಹಚ್ಚುತ್ತದೆ. ಅಲ್ಲಿಯ ಯೋಗಾಯೋಗ ಕೂಡಿ ಬಂತೆಂದಾದರೆ ತಾನೇತಾನಾಗಿ ಸೆಳೆದು ಅಲ್ಲಿಗೆ ಹೋಗುತ್ತೇನೆ.

ಇಲ್ಲಿಂದ ದ್ವಾರಕೆಗೆ ಹೋಗುತ್ತೇನೆ. ಸಮುದ್ರದ ವಾತಾವರಣ ಒಳ್ಳೆಯದೆನಿಸಬಹುದು. ಎಲ್ಲರೂ ಪ್ರೇಮದಿಂದಿದ್ದು, ಜ್ಞಾನಾಭ್ಯಾಸಾದಿಗಳನ್ನು ನಿರಾಲಸ್ಯದಿಂದ ಮಾಡುತ್ತಾ ಇರಿ. ‘ಪ್ರಮಾದೋ ಬ್ರಹ್ಮನಿಷ್ಠಾಯಾ ನ ಕರ್ತವ್ಯಃ ಕದಾಚನ|
ಪ್ರಮಾದೋ ಮೃತ್ಯುರಿತ್ಯಾಹುವಿದ್ಯಾಯಾಂ ಬ್ರಹ್ಮವಾಹಿನಃ||
‘ಯಥಾಪ್ರಕೃಷ್ಟಂ ಶೈವಾಲಂ ಕ್ಷಣಮಾತ್ರಂ ನ ತಿಷ್ಠತಿ|
ಆವೃಣೋತಿ ತಥಾ ಮಾಯಾ ಪ್ರಾಜ್ಞಂವಾಪಿ ಪರಾಂಗ್ಮುಖಮ್||
ಇದನ್ನು ಲಕ್ಷದಲ್ಲಿಟ್ಟು ಒಂದು ಕ್ಷಣವೂ ಪರಾಂಗ್ಮುಖ ಅಥವಾ ಬಹಿರ್ಮುಖ ಇರಬಾರದು.

RELATED ARTICLES  ಜಗದ ರಕ್ಷಕನ ಜನುಮದಿನ.

ಸ್ವಪ್ರಕಾಶಕವಾಗಿದ್ದು ಯಾವುದರಲ್ಲಿ ಬೇರೆ ಎಂದು ಯಾವುದೂ ಎಂದೂ ಉತ್ಪನ್ನವಾಗುವದಿಲ್ಲವೋ, ಯಾವುದರಲ್ಲಿ ಬೇರೆ ಎಂದು ಯಾವುದೂ ಇಲ್ಲವೋ ಆ ರೀತಿಯ ನಿತ್ಯ ನಿರ್ವಿಕಲ್ಪ ಜ್ಞಾನಮಾತ್ರ ಸ್ವರೂಪವೇ ಎಂದು ನಿಶ್ಚಯಿಸಿ, ನಮ್ಮ ‘ನಾನು’ ಎಂಬ ಅನಿಸುವಿಕೆಯಿಂದಾರಂಭಿಸಿ ಉಳಿದೆಲ್ಲ ಕಲ್ಪನೆಗಳಲ್ಲೂ ಅದನ್ನೇ ಅಹರ್ನಿಶಿ ಅಖಂಡ ಇಡಲು ಪ್ರಯತ್ನಮಾಡಿ; ಇದಕ್ಕೇ ನಿಧಿಧ್ಯಾಸವೆನ್ನುತ್ತಾರೆ. ನಿಧಿಧ್ಯಾಸದಲ್ಲಿ ಸಾಕ್ಷಾತ್ಕಾರ ಹಿತಮಿತವಾಗಿದೆ. ಭಾದ್ರಪದ ಹುಣ್ಣಿವೆಯ ವರೆಗೆ ಇಲ್ಲಿ ಮುಕ್ಕಾಂ ಇದೆ. ಯಾರಾದರೂ ಒಬ್ಬರ ಹೆಸರಿನಲ್ಲಿ ಬರೆದ ಪತ್ರದಲ್ಲಿ ಯಾವ ಆಶೀರ್ವಾದ ಮತ್ತು ಉಪದೇಶವಿರುತ್ತದೆಯೋ ಅದು ಎಲ್ಲರಿಗೂ ಇರುತ್ತದೆ. ಇರಲಿ.

||ಸರ್ವೇ ಜನಾಃ ಸುಖಿನೋ ಭವಂತು||

ಶ್ರೀಧರ