ಪರೋಟದಲ್ಲಿ ಭಿನ್ನ ರುಚಿ-ಕಾರ್ನ್ ಪರೋಟ ಮಾಡುವ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ.
ಬೇಕಾಗುವ ಸಾಮಾಗ್ರಿಗಳು
ಗೋಧಿ ಹಿಟ್ಟು 2 ಕಪ್
ರುಚಿಗೆ ತಕ್ಕ ಉಪ್ಪು
ನೀರು 1 ಕಪ್
ಇತರ ಸಾಮಾಗ್ರಿಗಳು
ಜೋಳ 1 ಕಪ್
ಈರುಳ್ಳಿ 1
ಹಸಿ ಮೆಣಸಿನಕಾಯಿ 2
ಬೇಯಿಸಿದ ಆಲೂಗಡ್ಡೆ 1
ನಿಂಬೆ ರಸ 1 ಚಮಚ
ಜೀರಿಗೆ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ತಯಾರಿಸುವ ವಿಧಾನ:
* ಗೋಧಿ ಹಿಟ್ಟಿಗೆ ರುಚಿಗೆ ತಕ್ಕ ಉಪ್ಪು ಹಾಗೂ ಸ್ವಲ್ಪ ನೀರು ಹಾಕಿ ಚಪಾತಿಯ ಹದಕ್ಕೆ ತಟ್ಟಿ, ಅದನ್ನು ಕಾಟನ್ ಬಟ್ಟೆಯಿಂದ ಮುಚ್ಚಿ ಒಂದು ಬದಿಯಲ್ಲಿಡಿ.
* ಈಗ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿದ ಬಳಿಕ, 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಜೋಳವನ್ನು ಹಾಕಿ ಮತ್ತೆ 5 ನಿಮಿಷ ಫ್ರೈ ಮಾಡಿ, ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸಿ, ನಂತರ ಜೀರಿಗೆ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ 2-3 ನಿಮಿಷ ಸೌಟ್ ನಿಂದ ಆಡಿಸುತ್ತಾ ಬೇಯಿಸಿ, ನಂತರ ಉರಿಯಿಂದ ಇಳಿಸಿ ತಣ್ಣಗಾಗಲು ಇಡಿ.
* ನಂತರ ಅವುಗಳಿಂದ 8-10 ಉಂಡೆ ಕಟ್ಟಿ.
* ಈಗ ಕಲೆಸಿಟ್ಟ ಗೋಧಿ ಹಿಟ್ಟಿನಿಂದ 8-10 ಉಂಡೆ ಕಟ್ಟಿ.
* ಈಗ ಒಂದು ಉಂಡೆಯನ್ನು ತೆಗೆದುಕೊಂಡು ಚಪಾತಿಗೆ ಲಟ್ಟಿಸಿದಂತೆ ಲಟ್ಟಿಸಿ, ಅದರಲ್ಲಿ ಜೋಳದ ಉಂಡೆ ಇಟ್ಟು, ಮತ್ತೆ ಉಂಡೆ ಕಟ್ಟಿ ಲಟ್ಟಿಸಿ. ಈ ರೀತಿ ಉಳಿದ ಉಂಡೆಗಳನ್ನು ಲಟ್ಟಿಸಿ.
* ನಂತರ ತವಾವನ್ನು ಬಿಸಿ ಮಾಡಿ ಲಟ್ಟಿಸಿದ ಪರೋಟವನ್ನು ತವಾಕ್ಕೆ ಹಾಕಿ ಎರಡೂ ಬದಿ ಸ್ವಲ್ಪ ಕಂದು ಬಣ್ಣ ಬಂದಾಗ ತೆಗೆಯಿರಿ. ತಯಾರಾದ ಕಾರ್ನ್ ಪರೊಟವನ್ನು ಮೊಸರು ಬಜ್ಜಿಯ ಜೊತೆ ಸವಿಯಿರಿ.