ಅವಲಕ್ಕಿ ಚುಡಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
2 kg ಅವಲಕ್ಕಿ ,1/2 kg ಎಣ್ಣಿ, 2 ಬಟ್ಟಲು ಚಟ್ನಿ ಪುಡಿ ,1/2 ಬಟ್ಟಲು ಮೆಂತ್ಯದ ಹಿಟ್ಟು, 1/2 ಬಟ್ಟಲು ಶೇಂಗದ ಪುಡಿ,1/4 ಎಳ್ಳಿನ ಪುಡಿ, 1-3 TS ಪುಟಾಣಿ ಪುಡಿ,1TS ಅರಶಿಣ, 3 TS ಅಚ್ಚಖಾರದಪುಡಿ(ಬ್ಯಾಡಿಗಿ ಇದ್ರೆ ಒಳ್ಳೆದು),1/2 ಬಟ್ಟಲು ಪುಟಾನಿ,1/2 ಬಟ್ಟ್ಲು ಶೇಂಗಾ,2 ದಳ ಕರಿಬೇವು, 4-5 ಒಣಮೆಣಸಿನಕಾಯಿ,ಹಿಂಗು,2 TS ಸಾಸವೆ,ಜೀರಗೆ, ಸಕ್ಕರೆ, ಉಪ್ಪು.

RELATED ARTICLES  ಆರೋಗ್ಯಕರವಾದ ದಾಳಿಂಬೆ-ನಿಂಬೆ ರಸ.

ತಯಾರಿಸುವ ವಿಧಾನ
1) ದೊಡ್ಡ ಕಡಾಯಿಲಿ ಅವಲಕ್ಕಿಯನ್ನು ಕುರುಕುರು ಅನ್ನುವಂತೆ ಹುರಿದಿಟ್ಟಕೊಳ್ಳಿ
2) 1/2 ಕೇಜಿ ಎಣ್ಣೆ ಬಿಸಿಗಿಟ್ಟು ಶೇಂಗಾ ಪುಟಾಣಿ ಹಸಿ ವಾಸನೆ ಹೋಗೊವರೆಗು ಲಘು ಕೆಂಪಗೆ ಕರೆದುಕೊಳ್ಳಿ
3) ಕರಿಬೇವು ಒಣ ಮೆಣಸಿನಕಾಯಿ ಕರೆದುಕೊಂಡು ಎಣ್ಣೇಗೆ ಸಾಸವೆ ಜೀರಗೆ ಹಿಂಗು ಹಾಕಿ ಸ್ವಲ್ಪ ತಣ್ಣಗಾಗಲು ಬಿಡಿ
4) ಅವಲಕ್ಕಿಗೆ ಮೇಲೆ ಹೇಳಿದ ಎಲ್ಲಾ ಪುಡಿಗಳು, ಅರಶಿಣ,ಖಾರಪುಡಿ,ಉಪ್ಪು,ಸಕ್ಕರೆ,ಕರಿದಿಟ್ಟ ಪುಟಾಣಿ,ಶೇಂಗಾ ಹಾಕಿ ಒಂದು ಸರ್ತಿ ಚನ್ನಾಗಿ ಕಲೆಸಿ
5) ಕಲೆಸಿದ ಅವಲಕ್ಕಿಗೆ ಲಘು ಬಿಸಿಯಿರುವ ಎಣ್ಣಿ ಹಾಕಿ ಚನ್ನಾಗಿ ಮಸಾಲೆ ಕಲೆವಂತೆ ಕಲಿಸಿ ಕರಿದಿಟ್ಟು ಕರಿಬೇವು
ಒಣಮೆಣಸಿನಕಾಯಿ ಹಾಕಿ ಒಂದು ಸುತ್ತು ಕಲಿಸಿ. ದೀಪಾವಳಿ ಹಳ್ಳಿ ಅವಲಕ್ಕಿ ರೆಡಿ

RELATED ARTICLES  ಹಲಸಂದೆಕಾಳು ಉಸಲಿ: ಅರೋಗ್ಯ ಹಾಗೂ ರುಚಿಗಾಗಿ