ಬೇಕಾಗುವ ಸಾಮಗ್ರಿ ;- ಐದಾರು ಸೊಪ್ಪು(ನೀವು ಇಷ್ಟಪಡುವ ಯಾವುದೇ ವಿಧ ಬಳಸಿ).ತೊಗರಿ ಬೇಳೆ.. ಕಡ್ಲಬೇಳೆ ಕಡ್ಲೆಬೀಜ. ಎಳ್ಳು.. ಗಸಗಸೆ.. ಜಿಂಜರ ಬೆಳ್ಳುಳ್ಳಿ… ಈರುಳ್ಳಿ .ಬಟಾಣಿ.. ಆಲೂಗಡ್ಡೆ.. ಹುಣಸೆ.. ರಸ..ಉಪ್ಪು ಹಸಿ ಮೆಣಸಿನಕಾಯಿ.. ಸ್ವಲ್ಪ ಜೀರಗೆ ಹಾಕಿ ಮೆತ್ತಗೆ ಆಗುವ ಹಾಗೆ ಕುದಿಸಿ.

ಬಾಣಲೆಯಲ್ಲಿ ಎಣ್ಣೆ ಹಾಕಿ ಚಕ್ಕೆ.. ಮೆಣಸಿನ ಕಾಯಿ.. ಈರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ ಟೋಮ್ಯಾಟ ಹೆಚ್ಚಿ ಸೇರಿಸಿ ಚೆನ್ನಾಗಿ ಬಾಡಿಸಿ ಸ್ವಲ್ಪ ಉಪ್ಪ ಒಣಕಾರ ಧನೀಯಾಪುಡಿ ಹಸಿ ಕಾಯಿ ತುರಿದ ಸೇರಿಸಿ ಬಿಸಿ ನೀರು ಸ್ವಲ್ಪ ಸೇರಿಸಿ ಕುದಿಸಿ ತಣ್ಣಗಾದನಂತರ ಚೆನ್ನಾಗಿ ರುಬ್ಬಿಕೊಳ್ಳಿ.

RELATED ARTICLES  ಮೊಬೈಲ್‌ ಪ್ರಿಯರಿಗೆ ಇಲ್ಲಿದೆ ಸಂತಸದ ಸುದ್ದಿ

ಆನಂತರ ಬೇಳೆ ಸೊಪ್ಪಿನ ಮಿಶ್ರಣ ಮತ್ತು ಈ ರುಬ್ಬಿದ ಮಿಶ್ರಣ ಸೇರಿಸಿ ಸಣ್ಣಗೆ ಹುರಿಯಲ್ಲಿ ಕುದಿಸಿ ಅದು ಮೆದುವಾಗಿ ಮತ್ತೆ ಕಲಿಸಿ ತೇವಾಂಶವು ಕಡಿಮೆ ಆಗಲಿ.. ಸ್ವಲ್ಪ ಬೆಣ್ಣೆ ತುಪ್ಪ ಎಣ್ಣೆ ಆಲೀವ ಸ್ವಲ್ಪ ಸ್ವಲ್ಪ ಸೇರಿಸಿ ಕೈ ಆಡಿಸಿ ಚೆನ್ನಾಗಿ ಕಲಿಸಿರಿ.

RELATED ARTICLES  ಬ್ರಹ್ಮದೇವರ ಬರಹ ಅಳಿಸಿ ಹಾಕಲು ಯಾರು ಸಮರ್ಥರಿದ್ದಾರೆ?

ಇಪ್ಪತ್ತು ನಿಮಿಷ ನಂತರ ಈ ಚಪ್ಪನ ಪಚ್ಚಡಿ ರೆಡಿ ..ಇದು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವದರಿಂದ ಬಾಯಾರಿಕೆ ..ಮತ್ತೆ ಮತ್ತೆ ಹಸಿವು ಆಗುವುದಿಲ್ಲ ಭಾರದ ಅನುಭವ ಇರುವುದಿಲ್ಲ ಜೀರ್ಣ ಕಾರಕ ಮತ್ತು ಪುಷ್ಟಿ ಭರಿತ.

ಇದು ಏಗನೂರು ದೇವಾಲಯ ಸಾಲೀಗ್ರಾಮ ಪುಣ್ಯಕ್ಷೇತ್ರ ದ ವೈವಿಧ್ಯಮಯ ತಿನಿಸೂ ಹೌದು. ತೆಲಂಗಾಣದ ಈ ಅಡುಗೆ ವೃಧ್ದಮಕ್ಕಳಾದಿಯಾಗಿ ಒಟ್ಟಿಗೆ ತಿನ್ನುವ ಅಡುಗೆ.