ದೀಪಾವಳಿ ವಿಶೇಷ ಸಿಹಿ ಬಾದಾಮ್ ಪೂರಿ ಮಾಡುವ ವಿಧಾನವನ್ನು ನೀವು ಕಲಿಯಬಹುದು. ಈ ಕ್ರಮ ಅನುಸರಿಸಿ
೧.ಒಂದು ಪಾತ್ರದಲ್ಲಿ ಒಂದು ಕಪ್ ಮೈದಾಹಿಟ್ಟು, ಎರಡು ಚಮಚ ಕಾಯಿಸಿದ ತುಪ್ಪ,ಚಿಟಿಕೆ ಉಪ್ಪು, ಬೇಕಾದಲ್ಲಿ ಚಿಟಿಕೆ ಕೇಸರಿ ಬಣ್ಣ, ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ಕಲೆಸಿ ಹತ್ತು ನಿಮಿಷ ಮುಚ್ಚಿಡಿ.
೨.ನಂತರ ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು, ತೆಳ್ಳಗೆ ಲಟ್ಟಿಸಿಕೊಳ್ಳಿ. ಅದನ್ನು ತ್ರಿಕೋನ ಆಕಾರ ದಲ್ಲಿ ಮಡಚಿ ಒಂದು ವೀಡಿಯೋ ದಲ್ಲಿ ತೋರಿಸಿದಂತೆ ಲವಂಗ ಸೇರಿಸಿರಿ.
೩.ಕಾದ ಎಣ್ಣೆಯಲ್ಲಿ ಈ ಪೂರಿಗಳನ್ನು ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.
೪.ನಂತರ ಸಕ್ಕರೆ ಪುಡಿಯಲ್ಲಿ ಹೊರಳಿಸಿ ಕೊಬ್ಬರಿ ತುರಿಯಿಂದ ಅಲಂಕರಿಸಿದರೆ ಸಿಹಿಯಾದ ಬಾದಾಮ್ ಪುರಿ ಸವಿಯಲು ಸಿದ್ಧ.
೫.ಸಕ್ಕರೆ ಪುಡಿಯ ಬದಲು, ಒಂದು ಕಪ್ ಸಕ್ಕರೆ ಗೆ ಅರ್ಧ ಕಪ್ ನೀರು ಹಾಕಿ ಒಂದೆಳೆ ಪಾಕ ಮಾಡಿಕೊಂಡು ಅದರಲ್ಲಿ ಪುರಿಯನ್ನು ಹಾಕಿ ತೆಗೆದುಕೊಂಡು ಕೂಡಾ ತಯಾರಿಸಿಕೊಳ್ಳಬಹುದು.