ಸಿಹಿಗೆಣಸು ಡೋನಟ್ ಮಾಡುವ ವಿಧಾನಗಳು ಸುಲಭವಾಗಿ ಇಲ್ಲಿವೆ..
1) ಸಿಹಿಗೆಣಸು ಸಿಪ್ಪೆ ತೆಗೆದು, ಕತ್ತರಿಸಿದ ಹೋಳುಗಳ ಹಬೆಯಲ್ಲಿ ಬೇಯಿಸಿ.
2) ಬೇಯಿಸಿದ ಸಿಹಿಗೆಣಸು ಹೋಳುಗಳ ಹುಡಿಮಾಡಿ ತಣ್ಣಗಾದಮೇಲೆ ಗೋಧಿ ಹಿಟ್ಟಿನೂಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ “ನೀರು ಹಾಕದೆ” ಚಪಾತಿ ಹಿಟ್ಟಿನ ಹದಕ್ಕೆ ಕಲಸಿ.
3)”ಮೆದುವಡೆ”(ಉದ್ದಿನವಡೆ)ಯಂತೆ ರೂಪ ಕೊಟ್ಟು ಕಾದ ಎಣ್ಣೆಯಲ್ಲಿ ಕಂದುಬಣ್ಣ ಬರುವವರೆಗೆ ಹುರಿಯಿರಿ.
4) ಬೇಯಿಸಿದ “ಡೋನಟ್” ನ್ನು ಸಕ್ಕರೆ ಪಾಕಕ್ಕೆ ಹಾಕಿ ಇಡಬಹುದು. ಇಲ್ಲವಾದರೆ ಚೋಕೋಲೇಟ್ ಲೇಪನ ಮಾಡಬಹುದು.
ಮಕ್ಕಳೊಂದಿಗೆ ನೀವೂ ಕೂತು ಸವಿಯಿರಿ ಸಿಹಿಯಾದ ಸಿಹಿಗೆಣಸು ಡೋನಟ್