ಸುಲಭವಾಗಿ ಅತ್ಯುತ್ತಮ ಶಂಕರಪೋಳೆ ತಯಾರಿಸಬಹುದು. ಹೌದು ಅದು ಹೇಗೆ ಅಂತೀರಾ ಇಲ್ಲಿದೆ ಓದಿ.
ಬೇಕಾಗುವ ಸಾಮಗ್ರಿ :
1. ಒಂದು ಕಪ್ ಹಾಲು
2. ಒಂದು ಕಪ್ ಪುಡಿಮಾಡಿದ ಸಕ್ಕರೆ
3. ಒಂದು ಕಪ್ ತುಪ್ಪ
4. ಮೈದಾ ಹಿಟ್ಟು , ಏಲಕ್ಕಿ ಪುಡಿ
ಮಾಡುವ ವಿಧಾನ – ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲು , ಸಕ್ಕರೆ , ತುಪ್ಪ ಎಲ್ಲವನ್ನೂ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು , ಇದು ಆರಿದ ನಂತರ ಏಲಕ್ಕಿ ಪುಡಿ ಮತ್ತು ಮೈದಾಹಿಟ್ಟು ಹಾಕಿ ಕಲೆಸಿ ಕೊಳ್ಳಬೇಕು ,ಈ ಮಿಶ್ರಣಕ್ಕೆ ಏಷ್ಟು ಹಿಟ್ಟು ಹಿಡಿಯುತ್ತದೆಯೊ ಅಷ್ಟು ಮೈದಾಹಿಟ್ಟುನ್ನು ಹಾಕಿ ಗಟ್ಟಿಯಾಗಿ ಕಲೆಸಬೇಕು , ಸಿಹಿ ಜಾಸ್ತಿ ಬೇಕೆನಿಸಿದರೆ 1,2 ಸ್ಪೂನ್ ಸಕ್ಕರೆ ಪುಡಿ ಯನ್ನು ಹಾಕಿಕೊಳ್ಳಬಹುದು ಹಿಟ್ಟುನ್ನು ಚನ್ನಾಗಿ ನಾದಿ ಕೊಂಡು 3,4 ಭಾಗ ಮಾಡಿ ಚಪಾತಿ ತರಹ ಲಟ್ಟಿಸಿ ಕೊಂಡು ನಿಮ್ಮಗೆ ಬೇಕಾದ ರೀತಿಯಲ್ಲಿ ಕಟ್ ಮಾಡಿ ಕೊಂಡು ಕಾದ ಎಣ್ಣೆಯಲ್ಲಿ ಕರಿದುಕೊಳ್ಳಬೇಕು ( ನಿಧಾನ ಉರಿಯಲ್ಲಿ ಕರಿದುಕೊಳ್ಳಿ ) ಇಷ್ಟು ಮಾಡಿದರೆ ನೀವು ಇಷ್ಟಪಡುವ ಶಂಕರಪೋಳೆ ತಯಾರು.