ಈರುಳ್ಳಿ ಟಮೋಟ ಚಟ್ನಿ ತಯಾರಿಸುದು ಸುಲಭ. ಅದು ಹೇಗೆ ಅಂತೀರಾ? ಇಲ್ಲಿ ಓದಿ
ಬೇಕಾಗುವ ಸಾಮಗ್ರಿಗಳು: 1. ಈರುಳ್ಳಿ- 2 2. ಟೊಮೆಟೊ- 4-5 3. ಹಸಿಮೆಣಸಿನ ಕಾಯಿ- 2 4. ಉಪ್ಪು- ರುಚಿಗೆ ತಕ್ಕಷ್ಟು 5. ಅಚ್ಚ ಖಾರದ ಪುಡಿ- 1 ಟೀಚಮಚ 6. ಎಣ್ಣೆ- 1 ಟೀ ಚಮಚ 7. ಸಾಸಿವೆ- 1 ಟೀ ಚಮಚ
ಮಾಡುವ ವಿಧಾನ :
1. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
2. ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
3. ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಖಾರದ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
4. ಟೊಮೆಟೊ ನೀರು ಬಿಟ್ಟುಕೊಳ್ಳುವುದರಿಂದ ನೀರು ಹಾಕುವ ಅಗತ್ಯವಿಲ್ಲ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
5. ನಂತರ ಪಾತ್ರೆಗೆ ಹಾಕಿಕೊಳ್ಳಿ.
6. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಹಾಕಿ ಇದನ್ನು ಚಟ್ನಿಗೆ ಹಾಕಿ ಕಲಸಿ.
ಈರುಳ್ಳಿ ಟೊಮೆಟೊ ಚಟ್ನಿಯನ್ನು ದೋಸೆ, ಚಪಾತಿ ಅಥವ ಅನ್ನದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.