ಬೇಕಾಗುವ ಸಾಮಗ್ರಿಗಳು: . ಬಾಳೇಹಣ್ಣು- 2 (ಹೆಚ್ಚಿಕೊಳ್ಳಿ) . ಹಿಟ್ಟು- 125 ಗ್ರಾಂ . ದಾಲ್ಚಿನ್ನಿ ಪುಡಿ- 1 ಟೀಚಮಚ . ಬೂರಾ ಸಕ್ಕರೆ- 3 ಟೀಚಮಚ . ಬೆಲ್ಲ ( ಸಕ್ಕರೆಯ ಬದಲು) . ಹಾಲು- 120 ಮಿಲಿ . ಎಣ್ಣೆ . ಮೇಲೆ ಹಾಕಲು ಜೇನು ತುಪ್ಪ (ಬೇಕಾದರೆ)

ಮಾಡುವ ವಿಧಾನ; ಬಾಳೆಹಣ್ಣನ್ನು ಕತ್ತರಿಸಿಕೊಳ್ಳಿ. . ಒಂದು ಪಾತ್ರೆಗೆ ಹಿಟ್ಟು, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ ಮತ್ತು ಸಕ್ಕರೆ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಸಕ್ಕರೆಯ ಬದಲು ಬೆಲ್ಲವನ್ನು ಸೇರಿಸಿಕೊಳ್ಳಬಹುದು. .

RELATED ARTICLES  ಇಂದಿನ ಅಹಾರ ಮತ್ತು ಅರೋಗ್ಯ

ನಂತರ ಅದಕ್ಕೆ ಹಾಲನ್ನು ಸೇರಿಸಿ ಒಂದು ಹದಕ್ಕೆ ಬರುವಂತೆ ನಯವಾಗಿ ಕಲಸಿಕೊಳ್ಳಿ. . ಈ ಮಿಶ್ರಣಕ್ಕೆ ಬಾಳೆಹಣ್ಣನ್ನು ಸೇರಿಸಿ. . ಹೆಂಚಿನ ಮೇಲೆ ಒಂದು ಚಮಚ ಎಣ್ಣೆ ಹಾಕಿ ಅದು ಕಾದ ನಂತರ ಕಲಸಿಟ್ಟುಕೊಂಡ ಮಿಶ್ರಣವನ್ನು ಅದರ ಮೇಲೆ ಹಾಕಿ. . ಅದನ್ನು ದೋಸೆಯ ಹಾಗೆ ಹೆಂಚಿನ ತುಂಬ ವೃತ್ತಾಕಾರದಲ್ಲಿ ಪಸರಿಸಿ ಕೆಂಪಾಗುವವರೆಗೆ ಸುಡಿ. . ದೋಸೆ ಹುಯ್ಯುವಂತೆ ಇವುಗಳನ್ನು ತಯಾರಿಸಿ ಒಂದು ಚಮಚ ಜೇನುತುಪ್ಪವನ್ನು ಎಲ್ಲದರ ಮೇಲೆ ಹಾಕಿ. ಬಾಳೆಹಣ್ಣಿನ ಬೆಲ್ಲದ ದೋಸೆ ಸವಿಯಲು ರೆಡಿ.

RELATED ARTICLES  ಆಹಾ!!!!ರಾಗಿ ಮುದ್ದೆ..ಒಮ್ಮೆ ಮಾಡಿನೋಡಿ.