ಸಾಮಗ್ರಿಗಳು: ಹಲಸಂದೆಕಾಳು ಒಂದು ಬಟ್ಟಲು ಹೆಚ್ಚಿದ ಈರುಳ್ಳಿ ಸ್ವಲ್ಪ ಹೆಚ್ಚಿದ ಹಸಿಮೆಣಸಿನಕಾಯಿ ಎಣ್ಣೆ, ಸಾಸಿವೆ ಕರಿಬೇವು ಉಪ್ಪು ರುಚಿಗೆ ಕೊತ್ತುಂಬರಿಸೊಪ್ಪು ಕಾಯಿತುರಿ ನೀರು ಬೇಯಿಸಲು ಬೇಕಾಗುವಷ್ಟು

ಮಾಡುವ ವಿಧಾನ: ಹಲಸಂದೆಕಾಳುಗಳನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಅರ್ಧ ಲೋಟ ನೀರು ಹಾಕಿ,ಉಪ್ಪು ಮತ್ತು ಎಣ್ಣೆ ಸ್ವಲ್ಪ ಹಾಕಿ. ಬೇಯಿಸಿಕೊಳ್ಳಿ. ನೀರು ಜಾಸ್ತಿ ಹಾಕಿದ್ದರೆ ನೀರು ಬಸಿಯಿರಿ. ನೀರು ಎಷ್ಟು ಬೇಕೋ ಅಷ್ಟು ಮಾತ್ರ ಹಾಕಿ, ಕಾಳುಗಳು ಕರಗದಂತೆ ಗಟ್ಟಿಯಾಗಿ ಬೇಯಿಸಿಕೊಳ್ಳಿ. ಪಾತ್ರೆ/ಬಾಣಲೆಗೆ ಒಂದೆರಡು ಚಮಚ ಎಣ್ಣೆ ಹಾಕಿ, ಸಾಸಿವೆ,ಕರಿಬೇವು,ಹಸಿಮೆಣಸಿನಕಾಯಿ, ಈರುಳ್ಳಿಯನ್ನು ಹಾಕಿ,ಕೆಲವು ನಿಮಿಷ ಹುರಿಯಿರಿ,ಈರುಳ್ಳಿಯೂ ಸ್ವಲ್ಪ ಬಣ್ಣ ನಂತರ ಚಿಟಿಕೆ ಉಪ್ಪು ಹಾಕಿ , ಬೇಯಿಸಿರುವ ಕಾಳನ್ನು ಹಾಕಿ, ಎಲ್ಲವನ್ನು ಚೆನ್ನಾಗಿ ಬೆರೆಸಿ.

RELATED ARTICLES  ರುಚಿಕರವಾದ ಬದನೆಕಾಯಿ ರವೆ ಫ್ರೈ

ಕಾಯಿತುರಿ ಮತ್ತು ಕೊತ್ತುಂಬರಿ ಸೊಪ್ಪನ್ನು ಹಾಕಿ ಸರಿಯಾಗಿ ಬೆರೆಸಿ.ಇಳಿಸಿ,ಇದನ್ನು ಊಟಕ್ಕೆ ನೆಂಚಿಕೊಳ್ಳಲು ಚೆನ್ನಾಗಿರುತ್ತದೆ. ಕ್ಯಾನ್ ಬೀನ್ಸ್ ಉಪಯೋಗಿಸುವುದಾದರೆ ಬೇಯಿಸದೆ, ಕಾಳುಗಳಿಗೆ ನೇರವಾಗಿ ಒಗ್ಗರಣೆಯನ್ನು ಬೆರೆಸಿ, ಕೆಲವು ನಿಮಿಷ ಅದರಲ್ಲೆ ಹುರಿದು ಚೆನ್ನಾಗಿ ಬೆರೆಸಿ. ಹಲ್ಸಂದೆ ಕಾಳುಗಳು ಎರಡು ಬಣ್ಣಗಳಲ್ಲಿ ಸಿಗುತ್ತದೆ, ಕೆಂಪು ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತದೆ. ಹೈಬ್ರೀಡ್ ಕಾಳುಗಳು ಅಷ್ಟು ರುಚಿ ಇರುವುದಿಲ್ಲ. ಇಂಗ್ಲೀಷ್ ನಲ್ಲಿ ಬ್ಲಾಕ್ ಐ ಬೀನ್ ಎಂದು ಕರೆಯುತ್ತಾರೆ. ಈ ಕಾಳುಗಳು ಆರೋಗ್ಯಕ್ಕೂ ಉತ್ತಮ. ಇದನ್ನು ಮೊಳಕೆ ತೆಗೆದು ಸಾರಿಗೆ ಬಳಸಬಹುದು, ಇಲ್ಲವೆಂದರೆ ಹಾಗೆ ನೇರವಾಗಿಯೇ ಕಾಳುಗಳನ್ನು ಬೇಯಿಸಿಕೊಂಡು ಸಾರನ್ನು ತಯಾರಿಸಬಹುದು. ಅನ್ನ, ಮುದ್ದೆ, ಚಪಾತಿ,ರೊಟ್ಟಿಗಳಿಗೆ ಚೆನ್ನಾಗಿರುತ್ತದೆ.

RELATED ARTICLES  ರುಚಿ ರುಚಿಯಾದ ರವೆ ಪಾಯಸ ಮಾಡೋದು ಹೇಗೆ ಗೊತ್ತಾ?