Home BHATKAL ಭೀಕರ ಅಪಘಾತ : ಸವಾರ ಸಾವು.

ಭೀಕರ ಅಪಘಾತ : ಸವಾರ ಸಾವು.

ಭಟ್ಕಳ : ಚಲಿಸುತ್ತಿದ್ದ ಸುಜುಕಿ ಮೋಟರ್ ಸೈಕಲ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ನಡೆದಿದೆ.

ಅಪಘಾತವು ತಾಲೂಕಿನ ವೆಂಕ್ಟಾಪುರ ಬ್ರಿಡ್ಜ್ ಸಮೀಪ ಸಂಭವಿಸಿದೆ. ಮೃತ ಮೋಟಾರ್ ಸೈಕಲ್ ಸವಾರ ಉತ್ತರಕೊಪ್ಪ ಗೋಳಿಕುಂಬ್ರಿ ನಿವಾಸಿ ಪಿ.ಟಿ. ಚಾಕುಚ್ಚನ್ ಎಂದು ತಿಳಿದು ಬಂದಿದೆ. ಚಾಲಕ ಶಿವನಗೌಡ ಸುರೇಶಗೌಡ ಪಾಟೀಲ್ ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆ-66 ರಸ್ತೆಯಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿಕೊಂಡು ವೆಂಕಟಾಪುರ ಸೇತುವೆ ಸಮೀಪ ಬಂದ ವೇಳೆ ಅದೇ ರಸ್ತೆಯಲ್ಲಿ ಭಟ್ಕಳ ಕಡೆಯಿಂದ ಮುರ್ಡೇಶ್ವರ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿತ್ತು.

ಮೋಟಾರ್ ಸೈಕಲ್ ಸವಾರನ ಬಲಗೈಗೆ ಗಂಭೀರ ಪ್ರಮಾಣದ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಮ್.ಸಿ. ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.