Home KARWAR ಪತ್ತೆಯಾಯ್ತು 2 ಸಾವಿರ ವರ್ಷ ಹಿಂದಿನ ರೇಖಾಚಿತ್ರ

ಪತ್ತೆಯಾಯ್ತು 2 ಸಾವಿರ ವರ್ಷ ಹಿಂದಿನ ರೇಖಾಚಿತ್ರ

Oplus_131072

ಕಾರವಾರ: ಜಿಲ್ಲೆಯ ಭಟ್ಕಳದಲ್ಲಿ ಎರಡು ಸಾವಿರ ವರ್ಷಗಳ ಪುರಾತನ ರೇಖಾಚಿತ್ರ ಪತ್ತೆಯಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ನಿವೃತ್ತ ಪ್ರಾಧ್ಯಾಪಕ ಆರ್.ಎಂ ಶಡಕ್ಷರಯ್ಯ ಹೇಳಿದ್ದಾರೆ. ಕಾರವಾರ ನಗರದ ಜಿಲ್ಲಾ ಪತ್ರಿಕಾಭನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಭಟ್ಕಳ ತಾಲೂಕಿನ ಕರೂರು ಗ್ರಾಮದ ಬಳಿ ಚಿರಕಲ್ಲು ಬಂಡೆಯ ಮೇಲೆ ರೇಖಾಚಿತ್ರಗಳು ಪತ್ತೆಯಾಗಿದ್ದು ಅವು ತಾಮ್ರ ಶಿಲಾಸಂಸ್ಕೃತಿಗೆ ಹೋಲುತ್ತವೆ. 20 ರೇಖಾಚಿತ್ರ ಕೆತ್ತಿರುವುದನ್ನು ಕವಿವಿಯ ತಂಡವು ಪತ್ತೆ ಹಚ್ಚಿದೆ. ಅವುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಮನುಷ್ಯನ ಚಿತ್ರ, ಬಿಲ್ಲು ಹಿಡಿದಿರುವ ಮನುಷ್ಯನ ಚಿತ್ರ, ಎತ್ತು, ಜಿಂಕೆ ಸೇರಿದಂತೆ ಪ್ರಾಣಿಗಳ ಚಿತ್ರ ಹಾಗೂ ಮನುಷ್ಯ ಮತ್ತು ಪ್ರಾಣಿಗಳ ಕಾಲಿನ ಬಳಿ ಕುಳಿಗಳು ಇರುವುದು ಸೇರಿವೆ ಎಂದರು. ಚಿತ್ರಗಳಲ್ಲಿ ಪ್ರಾಣಿಗಳು, ಬಿಲ್ಲು ಹಿಡಿದಿರುವ ಮನುಷ್ಯ ಹಾಗೂ ಎತ್ತನ್ನು ತನ್ನ ಕೈಗೆ ಕಟ್ಟಿಕೊಂಡಿರುವ ಮನುಷ್ಯ ಇರುವುದರಿಂದ ಈ ಚಿತ್ರಗಳನ್ನು ಬೇರೆ ಬೇರೆ ಕಾಲಮಾನಗಳಲ್ಲಿ ಚಿತ್ರಿಸಲಾಗಿದೆ.