ಬೇಕಾಗುವ ಪದಾರ್ಥಗಳು
ಅವಲಕ್ಕಿ 1 ಕಪ್‌
ಹಾಲು 1 ಕಪ್‌
ಸಕ್ಕರೆ 1/2 ಕಪ್‌
ಗೋಡಂಬಿ ಸ್ವಲ್ಪ
ಒಣ ದ್ರಾಕ್ಷಿ 1 ಚಮಚ
ತುಪ್ಪ 3 ಚಮಚ
ಏಲಕ್ಕಿ 1/4 ಚಮಚ
ಮಿಲ್ಕ್‌ ಮೇಡ್‌ 3 ಚಮಚ

ತಯಾರಿಸುವ ವಿಧಾನ :
ಸ್ಟವ್ ಮೇಲೆ ಪ್ಯಾನ್ ಇಟ್ಟು 1 ಚಮಚ ತುಪ್ಪ ಹಾಕಿ. ನಂತರ ಅವಲಕ್ಕಿ ಹಾಕಿ ಗೋಲ್ಡನ್‌ ಬಣ್ಣ ಬರುವಂತೆ ಫ್ರೈ ಮಾಡಿ ನಂತರ ತೆಗೆಯಿರಿ.
ಒಂದು ಬೌಲ್‌ನಲ್ಲಿ ಹಾಲು ಹಾಕಿ ಕುದಿ ಬರಿಸಿ. ಸ್ಟೌಅನ್ನು ಸಿಮ್‌ನಲ್ಲಿಟ್ಟಿರಿ. ಅದಕ್ಕೆ ಫ್ರೈ ಮಾಡಿದ ಅವಲಕ್ಕಿ ಹಾಕಿ ಸರಿಯಾಗಿ ಮಿಕ್ಸ್‌ ಮಾಡಿ.
ಈ ಹಾಲಿಗೆ ಸಕ್ಕರೆ, ಮಿಲ್ಕ್‌ ಮೇಡ್‌ ಹಾಕಿ ಸರಿಯಾಗಿ ಕಲಸಿ. ಸಕ್ಕರೆ ಪೂರ್ತಿಯಾಗಿ ಕರಗುವಂತೆ ನೋಡಿ. ಅದಕ್ಕೆ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಿ.
ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದಲ್ಲಿ ಫ್ರೈ ಮಾಡಿ ಅದನ್ನು ಹಾಗೂ ಉಳಿದ ತುಪ್ಪವನ್ನು ಸಹ ಪಾಯಸಕ್ಕೆ ಹಾಕಿ.

RELATED ARTICLES  'ವೆಜ್ ಆಮ್ಲೆಟ್'