ಸಿಹಿ ಅಮಟೆಕಾಯಿ ಪಕೋಡ ಮಾಡಲು ಬೇಕಾಗುವ ಸಾಮಗ್ರಿಗಳು

ತುರಿದ ಅಮಟೆಕಾಯಿ ಒಂದು ಕಪ್, ಈರುಳ್ಳಿ ಅರ್ಧ ಕಪ್, ಕರಿ ಬೇವಿನ ಸೊಪ್ಪು ಅರ್ಧ ಕಪ್, ಕಡಲೆ ಹಿಟ್ಟು ಅರ್ಧ ಕಪ್, ಅಕ್ಕಿ ಹಿಟ್ಟು ಅರ್ದ ಕಪ್, ಅಚ್ಚ ಕಾರದ ಪುಡಿ ಎರಡು ಚಮಚ, ಗರಂ ಮಸಾಲೆ ಎರಡು ಚಮಚ, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು..

ಮಾಡುವ ವಿಧಾನ

ತುರಿದ ಅಮಟೆಕಾಯಿಯನ್ನು ನೀರಿನಲ್ಲಿ ನೆನೆಸಿ ಹಿಂಡಿಕೊಳ್ಳಿ ಅದಕ್ಕೆ ಕರಿ ಬೇವಿನ ಸೊಪ್ಪು, ಈರುಳ್ಳಿ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚ ಕಾರದ ಪುಡಿ, ಗರಂ ಮಸಾಲೆ ಉಪ್ಪು ನೀರು ಹಾಕಿ ಕಲಸಿ ಕಾದ ಎಣ್ಣೆಯಲ್ಲಿ ಕರಿಯಿರಿ.