ಏನೇನು ಬೇಕು?: ಬಸಳೆ ಸೊಪ್ಪು ಒಂದು ಕಟ್ಟು , ಹಲಸಿನ ಬೀಜ 7-8, ತೆಂಗಿನಕಾಯಿ ತುರಿ 2 ಕಪ್, ಹುರಿದ ಒಣಮೆಣಸಿನಕಾಯಿ 5-6, ಹುಣಸೆಹಣ್ಣು ಗೋಲಿಗಾತ್ರ, ರುಚಿಗೆ ಉಪ್ಪು , ಬೆಳ್ಳುಳ್ಳಿ ಎಸಳು 6-7, ಎಣ್ಣೆ
ಒಗ್ಗರಣೆಗೆ.
ಮಾಡೋದು ಹೇಗೆ: ಬಸಳೆಸೊಪ್ಪು ದಂಟಿನಿಂದ ಬಿಡಿಸಿ ಕತ್ತರಿಸಿ. ದಂಟನ್ನು ಮೂರು ಇಂಚಿನಷ್ಟು ಕತ್ತರಿಸಿ, ಹಲಸಿನ ಬೀಜ ಜಜ್ಜಿ ಕುಕ್ಕರ್‌ನಲ್ಲಿ ಹಾಕಿ ಉಪ್ಪು ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಿಡಿ. ತೆಂಗಿನತುರಿ, ಹುರಿದ ಮೆಣಸಿನಕಾಯಿ ,ಹುಣಸೆಹಣ್ಣು ಒಟ್ಟಿಗೆ ಹಾಕಿ ನಯವಾಗಿ ರುಬ್ಬಿ ಬೇಯಿಸಿಟ್ಟ ಬಸಳೆಗೆ ಹಾಕಿ ಕುದಿಸಿ. ಎಣ್ಣೆಯಲ್ಲಿ ಬೆಳ್ಳುಳ್ಳಿ ಒಗ್ಗರಣೆ ಮಾಡಿ ಪಾತ್ರೆಗೆ ಹಾಕಿ ಮುಚ್ಚಿಡಿ. ಅನ್ನ, ಚಪಾತಿ, ದೋಸೆಯೊಂದಿಗೆ ತಿನ್ನಬಹುದು.