ಬೇಕಾಗುವ ಸಾಮಗ್ರಿಗಳು:
ಬೇಯಿಸಿದ ಅನ್ನ 3 ಕಪ್‌ ,
ಡಾರ್ಕ್‌ ಸೊಯಾ ಸಾಸ್‌ ಒಂದೂವರೆ ಸ್ಪೂನ್‌ ,
ಚಿಲ್ಲಿ ಸಾಸ್‌ 1 ಸ್ಪೂನ್‌ ,
ಪೆಪ್ಪರ್‌ ಪೌಡರ್‌ 1/2 ಸ್ಪೂನ್‌ ,
ಉರುಟಾಗಿ ತೆಳುವಾಗಿ ಹೆಚ್ಚಿರೋ ಈರುಳ್ಳಿ 5 ,
ಎಣ್ಣೆ,
ಉಪ್ಪು

ಮಾಡುವ ವಿಧಾನ:
ಬಾಣಲೆಗೆ ಎಣ್ಣೆ ಹಾಕಿ ಹೆಚ್ಚು ಉರಿಯಲ್ಲಿ ಬಿಸಿಮಾಡಿ.
ಎಣ್ಣೆ ಚೆನ್ನಾಗಿ ಕಾದ ಬಳಿಕ ಈರುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ. ಇದರ ಜೊತೆಗೆ ಕ್ಯಾರೆಟ್‌, ಕ್ಯಾಪ್ಸಿಕಂ, ಕ್ಯಾಬೇಜ್‌, ಹುರುಳಿಕಾಯಿ ಮೊದಲಾದ ತರಕಾರಿಗಳನ್ನೂ ಉದ್ದುದ್ದಕ್ಕೆ ಹಚ್ಚಿ ಫ್ರೈ ಮಾಡಬಹುದು.

ಡಾರ್ಕ್‌ ಸೋಯಾ ಸಾಸ್‌, ಚಿಲ್ಲಿ ಸಾಸ್‌, ಪೆಪ್ಪರ್‌ ಪೌಡರ್‌ ಹಾಗೂ ಉಪ್ಪುನ್ನು ಇದಕ್ಕೆ ಸೇರಿಸಿ ತಿರುವುತ್ತಿರಿ

ಇದಕ್ಕೆ ಅನ್ನ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಈಗ ಒಂದು ಪ್ಲೇಟ್ ಗೆ ಸರ್ವ್ ಮಾಡಿದರೆ ರುಚಿಕರವಾದ ವೆಜ್ ಫ್ರೈಡ್ ರೈಸ್ ಸವಿಯಲು ಸಿದ್ದ.