ಬೇಕಾಗುವ ಪದಾರ್ಥಗಳು…
ಮೈದಾ – 2 ಬಟ್ಟಲು
ಸಕ್ಕರೆ – 1/2 ಬಟ್ಟಲು
ತುಪ್ಪ – 1 ಚಮಚ
ಮಜ್ಜಿಗೆ – ಅರ್ಧ ಬಟ್ಟಲು
ಅಡುಗೆ ಎಣ್ಣೆ – ಕರಿಯಲು

ಮಾಡುವ ವಿಧಾನ…

ಮೈದಾ ಹಿಟ್ಟಿಗೆ ಮಜ್ಜಿಗೆ ಹಾಕಿ ಕಲಸಬೇಕು. ಈ ಹಿಟ್ಟು ಒಂದು ರಾತ್ರಿಯಿಡೀ ನೆನೆಯಲು ಬಿಡಬೇಕು. ಮರುದಿನ ಹಿಟ್ಟಿಗೆ 2-3 ಚಮಚ ಮೈದಾ, ತುಪ್ಪ ಸೇರಿಸಿ ಮಿಶ್ರಣ ಮಾಡಬೇಕು.
ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ಸಕ್ಕರೆ ಹಾಕಿ ಸಕ್ಕರೆ ಮುಳುಗುವಷ್ಟು ನೀರು ಹೇಕಿ ಪಾಕ ತಯಾರು ಮಾಡಿಕೊಳ್ಳಬೇಕು.
ಪಾಕ ಹದಕ್ಕೆ ಬಂದನ ನಂತರ ಅದಕ್ಕೆ ಕೇಸರಿ ಹಾಕಿ ಸ್ವಲ್ಪ ಹೊಟ್ಟು ಇಳಿಸಬೇಕು.
ಬಾಣಲೆಯ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಕಾಯಲು ಬಿಡಬೇಕು.
ಕಲಸಿಟ್ಟುಕೊಂಡ ಹಿಟ್ಟನ್ನು ಒಂದು ಜಿಲೇಬಿ ತೂತಿನ ಪರಿಕರದಲ್ಲಿ ವೃತ್ತಾಕಾರವಾಗಿ ಎಣ್ಣೆಗೆ ಬಿಡಬೇಕು. ಕಂದು ಬಣ್ಣಕ್ಕೆ ಬರುತ್ತಿದ್ದಂತೆಯೇ ತೆಗೆದು ಸಕ್ಕರೆ ಪಾಕಕ್ಕೆ ಹಾಕಬೇಕು. 5 ನಿಮಿಷಗಳ ಬಳಿಕ ಪಾಕದಿಂದ ತೆಗೆಯಬೇಕು. ಹೀಗೆ ಮಾಡಿದರೆ ರುಚಿಕರವಾದ ಹಾಗೂ ಗರಿ ಗರಿಯಾದ ಜಿಲೇಬಿ ಸವಿಯಲು ಸಿದ್ಧ.

RELATED ARTICLES  ಹಲಸಂದೆಕಾಳು ಉಸಲಿ ಮಾಡುವುದು.